ಅಂಬಾಲಾ (ಹರಿಯಾಣಾ): ಇಲ್ಲಿನ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರೊಂದರಲ್ಲಿ ಇರಿಸಿದ್ದ 5 ಕಿಲೋಗಿಂತ ಹೆಚ್ಚಿದ್ದ ಸ್ಫೋಟಕವನ್ನು ಪತ್ತೆ ಮಾಡಿದ್ದು, ದೀಪಾವಳಿ ಹಬ್ಬಕ್ಕೆ ನಾಲ್ಕಾರು ದಿನಗಳಿರುವ ಮೊದಲೇ ಸಂಭವಿಸಬಹುದಾಗಿದ್ದ ಮಾರಕ ಸ್ಪೋಟ ಮತ್ತು ಅದರಿಂದಾಗಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದಂತಾಗಿದೆ ಎಂದು ಗುರುವಾರ ಬೆಳಿಗ್ಗೆ ಪೊಲೀಸರು ತಿಳಿಸಿದ್ದಾರೆ.