ಸಿವೆಟ್ ಕಾಫಿ ತಯಾರಿಸುವುದು ಹೇಗೆ?
ಪುನುಗು ಬೆಕ್ಕು ಕಾಫಿ ಬೀಜವನ್ನು ತಿನ್ನುತ್ತದೆ. ಈ ಬೆಕ್ಕಿನ ಮಲವನ್ನು ಸಂಗ್ರಹಿಸಿ ಸಂಸ್ಕರಿಸಿದ ನಂತರ ಆ ಕಾಫಿ ಬೀಜಗಳನ್ನು ಮಾರಲಾಗುತ್ತದೆ. ಪುನುಗು ಬೆಕ್ಕಿನ ಮಲದಲ್ಲಿರುವ ಕಾಫಿ ಬೀಜಗಳು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ್ದು ಇವುಗಳನ್ನು ಸಂಗ್ರಹಿಸುವುದಕ್ಕೆ, ಸಂಸ್ಕರಿಸುವುದಕ್ಕೆ ಮತ್ತು ಗುಣಮಟ್ಟವನ್ನು ಕಾಪಾಡುವ ಪ್ರಕ್ರಿಯೆಗೆ ಹೆಚ್ಚಿನ ಶ್ರಮ ಮತ್ತು ವೆಚ್ಚ ತಗಲುವುದರಿಂದ ಈ ಕಾಫಿ ತುಂಬಾ ದುಬಾರಿಯಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಯುರೋಪ್ ನಲ್ಲಿ ಸಿವೆಟ್ ಕಾಫಿಗೆ ಬಾರಿ ಬೇಡಿಕೆ ಇದ್ದು ವಿದೇಶಗಳಲ್ಲಿ ಈ ಕಾಫಿ ಬೀಜದ ಬೆಲೆ ಕೆಜಿಗೆ ₹20,000ದಿಂದ ₹25,000 ಇದೆ.