ಪೂಂಚ್: ಕದನವಿರಾಮ ಉಲ್ಲಂಘಿಸಿರುವ ಪಾಕ್ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ಷೆಲ್ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಕರ್ಮರಾ ವಲಯದಲ್ಲಿರುವ ಫಕೀರ್ ದರಾ ಶಾಲಾ ಆವರಣದಲ್ಲಿ ಷೆಲ್ ದಾಳಿ ನಡೆದಿದ್ದು, ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ.
ಷೆಲ್ ದಾಳಿಯಿಂದ ಕಟ್ಟಡದ ಕೆಲವು ಭಾಗಗಳು ಕುಸಿದು ಬಿದ್ದಿದ್ದು, ಶಾಲಾ ಗೋಡೆಯ ಮೇಲೆ ಬುಲೆಟ್ ಕಲೆ ಅಚ್ಚೊತ್ತಿದೆ.
ಬುಧವಾರ ಬೆಳಗ್ಗೆಯಿಂದಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ದಾಳಿಯಿಂದಾಗಿ ಪ್ರಸ್ತುತ ಪ್ರದೇಶದಲ್ಲಿರುವ 25 ಶಾಲೆಗಳನ್ನು ಮುಚ್ಚಲಾಗಿದೆ.
ಪೂಂಚ್ ಜಿಲ್ಲೆಯ ಶಹಾಪುರದಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿರುವುದಾಗಿ ಎಎನ್ಐ ಸುದ್ದಿ ಮಾಧ್ಯಮ ವರದಿ ಮಾಡಿದೆ.