ಪಣಜಿ(ಪಿಟಿಐ): ಇಲ್ಲಿಗೆ ಸಮೀಪದ ಕಾಣಕೋಣ್ನಲ್ಲಿ ಶನಿವಾರ ಕುಸಿದ ನಿರ್ಮಾಣ ಹಂತದ ವಸತಿಗೃಹ ಕಟ್ಟಡದ ಅವಶೇಷ ತೆರವು ಕಾರ್ಯಾಚರ ಣೆಗೆ ಮತ್ತೊಂದು ಭೀತಿ ಎದುರಾಗಿದೆ.
ಇದೇ ಕಟ್ಟಡದ ಪಕ್ಕದಲ್ಲಿ ರುವ ಐದು ಮಹಡಿಯ ಕಟ್ಟಡ ವಾಲ ತೊಡಗಿರುವುದರಿಂದ ಮತ್ತಷ್ಟು ಕಾರ್ಯಾಚರಣೆ ಮುಂದುವರಿಸಲು ಅಡ್ಡಿಯಾಗುತ್ತಿದೆ.
‘ಪಕ್ಕದಲ್ಲಿರುವ ಎರಡು ಕಟ್ಟಡಗಳು ವಾಲತೊಡಗಿದ್ದರಿಂದ ಪರಿಹಾರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡಿರುವ 16 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.