ಹೈದರಾಬಾದ್(ಐಎಎನ್ಎಸ್): ‘ನಾನು ಜೀವನ ಪರ್ಯಂತ ಭಾರತೀಯಳಾಗಿರುತ್ತೇನೆ’ ಎಂದು ತೆಲಂಗಾಣದ ನೂತನ ಪ್ರಚಾರ ರಾಯಬಾರಿಯಾಗಿ ನೇಮಕಗೊಂಡಿರುವ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗುರುವಾರ ಹೇಳಿದ್ದಾರೆ.
ನಾನು ಪಾಕಿಸ್ತಾನದ ಶೋಯಬ್ ಮಲಿಕ್ ಅವರನ್ನು ಮದುವೆಯಾಗಿದ್ದೇನೆ. ಆದರೆ, ನಾನು ಭಾರತೀಯಳು, ನನ್ನ ಜೀವಮಾನದ ಕೊನೆಯವರೆಗೆ ಭಾರತೀಯಳಾಗಿಯೇ ಇರುತ್ತೇನೆ ಎಂದು ಹೇಳಿದರು.
ನನ್ನ ಪಾಲಿಗೆ ಇದು ಅತ್ಯಂತ ಅಮೂಲ್ಯ ಸಮಯ. ಇದನ್ನು ರಾಷ್ಟ್ರ ಮತ್ತು ರಾಜ್ಯದ ತುರ್ತು ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸುತ್ತೇನೆ ಎಂದಿದ್ದಾರೆ.
ಸಾನಿಯಾ ಅವರನ್ನು ತೆಲಂಗಾಣದ ಪ್ರಚಾರ ರಾಯಬಾರಿಯನ್ನಾಗಿ ನೇಮಕ ಮಾಡಿದ್ದಕ್ಕೆ ತೆಲಂಗಾಣ ಬಿಜೆಪಿ ಮುಖಂಡರು ಬುಧವಾರ ವಿರೋಧ ವ್ಯಕ್ತಪಡಿಸಿದ್ದರು.