ನಾಗ್ಪುರ್(ಐಎಎನ್ಎಸ್): ತೈಲ ಕಲಬೆರಕೆ ಪ್ರಕರಣಗಳ ತನಿಖೆ ನಡೆಸಲು ಹೋಗಿದ್ದ ನಾಸಿಕ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಬೆಂಕಿ ಹಚ್ಚಿ ಸಾಯಿಸಿದ ಘಟನೆ ನಡೆದ ಒಂದು ವಾರಕ್ಕೆ ಸರಿಯಾಗಿ, ಇಂದು ಮಂಗಳವಾರ ತೈಲ ಮಾಫಿಯಾದವರು ಹತ್ತು ಜನ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.