ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಸಿ.ಕೆ. ಪ್ರಸಾದ್‌ ಪತ್ರಿಕಾ ಮಂಡಳಿ ಅಧ್ಯಕ್ಷ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಪತ್ರಿಕಾ ಮಂಡಳಿಯ ಮುಂದಿನ ಅಧ್ಯಕ್ಷ­ರನ್ನಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಸಿ.ಕೆ. ಪ್ರಸಾದ್‌ ಅವ­ರನ್ನು ನೇಮಕ ಮಾಡಲಾಗಿದೆ.

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ನೇತೃತ್ವದ ಸಮಿತಿಯು ಪ್ರಸಾದ್‌ ಅವ­ರನ್ನು ಆಯ್ಕೆ ಮಾಡಿದೆ. ಹಿಂದಿನ ಅಧ್ಯಕ್ಷ ನ್ಯಾ. ಮಾರ್ಕಂಡೇಯ ಕಟ್ಜು ಅವರ ಸ್ಥಾನ­­ವನ್ನು ಪ್ರಸಾದ್‌ ತುಂಬಲಿದ್ದಾರೆ.

ಈ ನೇಮಕಾತಿಯ ಮಾಹಿತಿ ತನಗೆ ತಲುಪಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂಲ­ಗಳು ಮಂಗಳವಾರ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT