ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಮಹಿಳೆ ಮೇಲಿನ ಲೈಂಗಿಕ ಹಿಂಸಾಚಾರ ವಿರುದ್ಧ ಹಸುವಿನ ಮುಖವಾಡ

Last Updated 1 ಜುಲೈ 2017, 18:54 IST
ಅಕ್ಷರ ಗಾತ್ರ

ಭಾರತದಲ್ಲಿ ಸುರಕ್ಷತೆ ವಿಷಯ ಬಂದಾಗ ಒಬ್ಬ ಮಹಿಳೆಗಿಂತ ಹಸುವೇ ಹೆಚ್ಚು ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆಯನ್ನು ಈ ಛಾಯಾಚಿತ್ರಗಳು ಹುಟ್ಟುಹಾಕುತ್ತವೆ.

ಈ ಸುಕ್ಷತೆ ವಿಷಯವಾಗಿ ತನ್ನ ತಾಯ್ನಾಡಿನ ಮಹಿಳೆಯರ ಬಗ್ಗೆ ಇರುವ ದ್ವಂದ್ವ ನಿಲುವನ್ನು ಪ್ರತಿಭಟಿಸಲು ಹಸುವಿನ ಮುಖವಾಡವನ್ನು ಪ್ರೋತ್ಸಾಹಿಸುತ್ತಿದ್ದಾರೆ ಒಬ್ಬ ಕಲಾವಿದರೂ ಮತ್ತು ಮಹಿಳಾವಾದಿಯಾಗಿರುವ ಸುಜಾತ್ರೋ ಘೋಷ್‌.

2012ರ ಡಿಸೆಂಬರ್‌ನಲ್ಲಿ ದೆಹಲಿಯ ಬಸ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಹಲವು ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ನೋಡಿದಾಗ, ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಹಿಂಸಾಚಾರವು ಪ್ರಮುಖ ವಿಷಯವಾಗಿದೆ.

ದೆಹಲಿ ಪೊಲೀಸರ ಮಾಹಿತಿ ಪ್ರಕಾರ, 2015ರಲ್ಲಿ ಭಾರತದಲ್ಲಿ ಕೇವಲ ಶೇಕಡಾ 29ರಷ್ಟು ಅತ್ಯಾಚಾರ ಪ್ರಕರಣಗಳು ಶಿಕ್ಷೆಗೆ ಗುರಿಯಾಗಿವೆ. ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳ ಪೈಕಿ ಕೇವಲ 12ರಷ್ಟು ಜನ ಅಪರಾಧಿಯಾಗಿದ್ದಾರೆ.

’ನನ್ನ ದೇಶದಲ್ಲಿ, ಹಸುಗಳನ್ನು ಮಹಿಳೆಗಿಂತ ಹೆಚ್ಚು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಬಹುತೇಕ ಹಿಂದೂಗಳು ಪವಿತ್ರ ಪ್ರಾಣಿ ಎಂದು ಪರಿಗಣಿಸುವ ಹಸುಗಿಂತ ಹೆಚ್ಚಾಗಿ ಅತ್ಯಾಚಾರ ಅಥವಾ ಲೈಂಗಿಕ ಹಲ್ಲೆಗೊಳಗಾದ ಮಹಿಳೆಗೆ ನ್ಯಾಯ ದೊರಕಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ದುಃಖದ ಸಂಗತಿ’ ಎಂದು ಘೋಷ್‌ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT