ಹೌದು ಇಂಗ್ಲೀಷ್ ಭಾಷೆಯಲ್ಲಿನ ಪ್ರಯೋಜನ ಅರಿತ ದೆಹಲಿ ಶಾಲಾ ಮಕ್ಕಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಸರ್, ನಮಗೂ ಇಂಗ್ಲೀಷ್ನಲ್ಲಿ ಮಾತನಾಡಲು ಕಲಿಸಿಕೊಡಿ ಎಂಬ ಒಕ್ಕೊರಲ ಧ್ವನಿ ಕೇಳಿತಂತೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲ್, ಸಾಮಾನ್ಯವಾಗಿ ಸರ್ಕಾರಿ ಶಾಲಾ ಮಕ್ಕಳು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬಂದವರಾಗಿರುತ್ತಾರೆ. ಇದು ಅವರ ಪ್ರಮುಖ ಬೇಡಿಕೆ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದ ದೆಹಲಿ ಸರ್ಕಾರ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಜಾರಿಗೆ ತಂದಿದೆ.