ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ಬೆಂಬಲ ವಾಪಸಿಗೆ ಎನ್‌ಪಿಎಫ್‌ ತೀರ್ಮಾನ

Last Updated 19 ಮೇ 2019, 19:36 IST
ಅಕ್ಷರ ಗಾತ್ರ

ಇಂಫಾಲ್‌: ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳಲು ನಾಗಾ ಪೀಪಲ್ಸ್‌ ಫ್ರಂಟ್ (ಎನ್‌ಪಿಎಫ್‌) ಪಕ್ಷವು ತೀರ್ಮಾನಿಸಿದೆ.

ಭಾನುವಾರ ಈ ಮಾಹಿತಿ ನೀಡಿದ ಎನ್‌ಪಿಎ‍ಫ್‌ ರಾಜ್ಯ ಘಟಕದ ಅಧ್ಯಕ್ಷ ಅವಾಂಗ್‌ಬೊ ನ್ಯೂಮೈ, ‘ಸಣ್ಣ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳದ ಬಿಜೆಪಿ ನಿಲುವನ್ನು ಖಂಡಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

60 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಎನ್‌ಪಿಎಫ್‌ ನಾಲ್ವರು ಸದಸ್ಯರನ್ನು ಹೊಂದಿದೆ. ಬೆಂಬಲ ವಾಪಸು ತೆಗೆದುಕೊಂಡರೂ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

‘ಬೆಂಬಲ ವಾಪಸು ಪಡೆಯಲು ತೀರ್ಮಾನಿಸಲಾಗಿದೆ. ಮೇ 23ರಂದು ಲೋಕಸಭೆ ಚುನಾವಣೆ ಮತಎಣಿಕೆ ಪ್ರಕ್ರಿಯೆ ಅಂತ್ಯವಾದ ಬಳಿಕ ಇದನ್ನು ಜಾರಿಗೊಳಿಸಲಾಗುವುದು’ ಎಂದು ನ್ಯೂಮೈ ತಿಳಿಸಿದರು.

ಬಿಜೆಪಿಯ ಹಿರಿಯ ಮುಖಂಡರೊಬ್ಬರು, ‘ಪಕ್ಷವು ವಿಧಾನಸಭೆಯಲ್ಲಿ 29 ಸದಸ್ಯ ಬಲ ಹೊಂದಿದೆ. ತಲಾ ಒಬ್ಬರು ಸದಸ್ಯರಿರುವ ಎಲ್‌ಜೆಪಿ, ಎಐಟಿಸಿ ಮತ್ತು ಒಬ್ಬ ಪಕ್ಷೇತರ ಸದಸ್ಯರ ಬೆಂಬಲವನ್ನು ಪಡೆದಿದೆ. ಹೀಗಾಗಿ, ಎನ್‌ಪಿಎಫ್‌ ನಿರ್ಧಾರದಿಂದ ಅಂಥ ಪರಿಣಾಮವೇನೂ ಆಗದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT