ಜಮ್ಮು (ಪಿಟಿಐ): ದೇಶದೆಲ್ಲಡೆ ಪಟಾಕಿಗಳ ಸದ್ದು... ಆದರೆ ಗಡಿಯಲ್ಲಿ ಮಾತ್ರ ಗುಂಡಿನ ಮೊರೆತ. ಜಮ್ಮು ಮತ್ತು ಕಾಶ್ಮೀರದ ಜಮ್ಮು ಹಾಗೂ ಸಾಂಬಾ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಗಡಿಯ ಹೊರ ಚೌಕಿಗಳ ಮೇಲೆ ಪಾಕಿಸ್ತಾನ ಗುರುವಾರ ಮತ್ತೆರಡು ಬಾರಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ.