ಕೋಲ್ಕತ್ತಾ (ಪಿಟಿಐ): ಖಾಸಗಿ ವಿಮಾನವೊಂದು ಶುಕ್ರವಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಹಕ್ಕಿ ಓಡಿಸುವನೊಬ್ಬ ಅಡ್ಡಿಯಾದ್ದರಿಂದ 10 ನಿಮಿಷ ತಡವಾಗಿ ಇಳಿದಿದೆ.
ಬೆಂಗಳೂರಿನಿಂದ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ರನ್ವೇ–2ರಲ್ಲಿ ಇಳಿಯುವ ವೇಳೆ ಈ ಘಟನೆ ನಡೆದಿದೆ.
ಹಕ್ಕಿ ಓಡಿಸುವವನ್ನು ರನ್ವೇ ಬಳಿ ಕಂಡ ಕೂಡಲೇ ಚಾಲಕ ವಿಮಾನ ಸಂಚಾರ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ ನಂತರ ವಿಮಾನ ಇಳಿಯಲು ಅವಕಾಶ ಕಲ್ಪಿಸಲಾಯಿತು. ನಿಲ್ದಾಣದಲ್ಲಿ ಹಕ್ಕಿಗಳನ್ನು ಓಡಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ.