ಪ್ರತಿಕೂಲ ಹವಾಮಾನ ಹೊರತುಪಡಿಸಿ ಉಳಿದ ದಿನಗಳಲ್ಲಿ ವಿಮಾನ ಹಾರಾಟ ವಿಳಂಬ ಅಥವಾ ರದ್ದಾದರೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಪರಿಹಾರ ನೀಡಬೇಕು. ಪ್ರಸ್ತುತ ದೇಶಿಯ ವಿಮಾನ ರದ್ದುಗೊಂಡರೆ ರೂ3000 ರೂಪಾಯಿವರೆಗೂ ಪರಿಹಾರ ನೀಡಲಾಗುತ್ತಿದೆ. ನೂತನ ನಿಯಮಾವಳಿಗಳು ಜಾರಿಯಾದರೆ ಪ್ರಯಾಣಿಕರಿಗೆ ಟಿಕೆಟ್ನ ಪೂರ್ಣ ಮೊತ್ತವನ್ನು ನೀಡಬೇಕಾಗುತ್ತದೆ. ಇದರ ಜತೆಗೆ ವಿಮಾನ ವಿಳಂಬವಾದರೂ ಪ್ರಯಾಣಿಕರಿಗೆ ಪರಿಹಾರ ದೊರೆಯಲಿದೆ.