‘ಮುಸ್ಲಿಮರು ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಕಾಶ್ಮೀರದಲ್ಲಿ ಶೇ 90 ಕ್ಕೂ ಅಧಿಕ ಮಂದಿ ಮುಸ್ಲಿಮರಿದ್ದಾರೆ. ಇತರ ರಾಜ್ಯಗಳ ಕೆಲ ಜಿಲ್ಲೆಗಳಲ್ಲಿ ಅವರ ಜನಸಂಖ್ಯೆ ಶೇ 70, 80, 90 ರಷ್ಟಿದೆ. ಆದ್ದರಿಂದ ಅವರು ಅಲ್ಪಸಂಖ್ಯಾತರಲ್ಲ’ ಎಂದು ಮಹಾರಾಜ್ ಹೇಳಿದ್ದಾರೆ. 2001–11ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಶೇ 16.8 ರಷ್ಟು ಹೆಚ್ಚಳವಾಗಿದ್ದರೆ, ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಶೇ 24.7 ರಷ್ಟು ಹೆಚ್ಚಳವಾಗಿದೆ ಎಂದು ಹೋದ ವಾರ ಬಿಡುಗಡೆಯಾದ ಜನಗಣತಿಯ ಮಾಹಿತಿ ತಿಳಿಸಿತ್ತು.