ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚುವರಿ ಶಸ್ತ್ರಾಸ್ತ್ರ: ಶೂಟರ್‌ ಸಜನ್‌ ಅಯ್ಯಪ್ಪಗೆ ಹೈಕೋರ್ಟ್‌ ಅನುಮತಿ

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಚ್ಚುವರಿ ಶಸ್ತ್ರಾಸ್ತ್ರ ಮತ್ತು 25 ಸಾವಿರ ಮದ್ದು ಗುಂಡುಗಳನ್ನು ಹೊಂದಲು ಕೋರಿರುವ ಖ್ಯಾತ ಶೂಟರ್ ಸಜನ್‌ ಅಯ್ಯಪ್ಪ ಅವರ ಮನವಿಯನ್ನು ಪರಿಗಣಿಸಿ’ ಎಂದು ಹೈಕೋರ್ಟ್, ಕೊಡಗು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.

ಈ ಸಂಬಂಧ ನಾಪೋಕ್ಲುವಿನ ಕೊಳಕೇರಿ ನಿವಾಸಿ ಸಜನ್ ಅಯ್ಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ಸಂಬಂಧಿಸಿದ ವಿನಾಯ್ತಿ ಷರತ್ತು (2) ಪ್ರಕಾರ ಯಾವುದೇ ಪ್ರಸಿದ್ಧ ಶೂಟರ್‌ ಹತ್ತು ಶಸ್ತ್ರಾಸ್ತ್ರಗಳನ್ನು ಹೊಂದಲು ಅರ್ಹರಾಗಿರುತ್ತಾರೆ’ ಎಂದು ಹೇಳಿದೆ.

ಪ್ರಕರಣವೇನು?: ಅಯ್ಯಪ್ಪ ಅವರು 2020ರ ಸೆಪ್ಟಂಬರ್ 21ರಂದು ಹೆಚ್ಚುವರಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಹೊಂದಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. 2022ರ ಡಿಸೆಂಬರ್ 28ರಂದು ಅವರಿಗೆ ಹಿಂಬರಹ ನೀಡಿದ್ದ ಜಿಲ್ಲಾದಿಕಾರಿ, ‘ನೀವು ಪ್ರಸಿದ್ಧ ಶೂಟರ್ ಆಗಲು ಹೊಂದಿರುವ ಅರ್ಹತೆಗಳನ್ನು ಬಹಿರಂಗಪಡಿಸಿಲ್ಲ. ಆದ್ದರಿಂದ, ಮುಂದಿನ 15 ದಿನಗಳಲ್ಲಿ ವಿವರಣೆ ನೀಡಬೇಕು’ ಎಂದು ತಿಳಿಸಿ ನೋಟಿಸ್‌ ನೀಡಿದ್ದರು.

ಇದನ್ನು ಪ್ರಶ್ನಿಸಿ ಅಯ್ಯಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಅಧಿಕಾರಿಗಳು ವಿನಾ ಕಾರಣ ನೆಪ ಹೇಳಿ ನನಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಅಲ್ಲದೆ, ಖ್ಯಾತ ಶೂಟರ್ ಎಂಬುದನ್ನು ತಿಳಿದುಕೊಳ್ಳಲು ನೋಟಿಸ್ ಜಾರಿ ಮಾಡಿದ್ದಾರೆ’ ಎಂದು ಆಕ್ಷೇಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT