ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ– ದಕ್ಷಿಣ ಬೆಸೆಯಲು ಭೋಜನ ಸ್ಪರ್ಧೆ!

ಅಪ್ಪಾಜಿ ಕ್ಯಾಂಟಿನ್‌ನಿಂದ ಆ.4 ರಂದು ವಿಶಿಷ್ಟ ಸ್ಪರ್ಧೆ
Last Updated 2 ಆಗಸ್ಟ್ 2018, 15:27 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆ ಹೋರಾಟದ ಕಾವು ಏರಿರುವ ಬೆನ್ನಲ್ಲೇ ‘ಅಪ್ಪಾಜಿ ಕ್ಯಾಂಟಿನ್‌’ ಜನಕ ಹಾಗೂ ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಜನರನ್ನು ಬೆಸೆಯಲು ವಿನೂತನ ಸ್ಪರ್ಧೆ ಏರ್ಪಡಿಸಿದ್ದಾರೆ.

‘ಅಪ್ಪಾಜಿ ಕ್ಯಾಂಟೀನ್‌’ಗೆ ಒಂದು ವರ್ಷ ತುಂಬಿರುವುದರ ನೆನಪಿನಲ್ಲಿ ಇದೇ 4 ರಂದು ಬಸವನಗುಡಿಯಲ್ಲಿರುವ ಅಪ್ಪಾಜಿ ಕ್ಯಾಂಟಿನ್‌ನಲ್ಲಿ ರಾಗಿ ಮುದ್ದೆ, ಬಸ್ಸಾರು ಮತ್ತು ಜೋಳದ ರೊಟ್ಟಿ ಎಣಗಾಯಿ ತಿನ್ನುವ ಸ್ಪರ್ಧೆ ನಡೆಯಲಿದೆ.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಕಾರ್ಯಕ್ರಮ ಇದಾಗಿದೆ ಎಂದು ಶರವಣ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಕಟಿಸಿರುವ ಆಕರ್ಷಕ ಬಹುಮಾನ ಹೀಗಿದೆ– ಮೊದಲ ಸ್ಥಾನ ಪಡೆದವರಿಗೆ 30 ದಿನಗಳು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ, ಎರಡನೇ ಬಹುಮಾನ ಪಡೆದವರಿಗೆ 20 ದಿನಗಳು ಉಪಹಾರ ಮತ್ತು ಮಧ್ಯಾಹ್ನದ ಊಟ, ಮೂರನೇ ಬಹುಮಾನ 10 ದಿನಗಳು ಉಪಹಾರ ಮತ್ತು ಮಧ್ಯಾಹ್ನದ ಊಟ ಉಚಿತವಾಗಿ ನೀಡಲಾಗುವುದು.

ಅಲ್ಲದೆ, ನಗರದಲ್ಲಿ ಎರಡು ಸಂಚಾರಿ ‘ಅಪ್ಪಾಜಿ ಕ್ಯಾಂಟಿನ್‌’ಗಳಿಗೆ ದೇವೇಗೌಡರು ಚಾಲನೆ ನೀಡಲಿದ್ದಾರೆ. ಈ ಕ್ಯಾಂಟಿನ್‌ಗಳು ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳು, ಬಸ್‌ಸ್ಟಾಂಡ್‌ಗಳು, ಕಾಲೇಜುಗಳ ಬಳಿ ಹೋಗಲಿದೆ. ಅತಿ ಕಡಿಮೆ ಬೆಲೆಗೆ ಶುಚಿ ಮತ್ತು ರುಚಿಯಾದ ಆಹಾರ ಪೂರೈಸಲಾಗುವುದು ಎಂದರು.

‘ಇಂದಿರಾ ಕ್ಯಾಂಟಿನ್‌ಗೆ ಸರ್ಕಾರ ನೀಡುವ ಹಣದಲ್ಲಿ ಶೇ 50 ರಷ್ಟು ನಮಗೆ ನೀಡಿದರೆ, ಅದಕ್ಕಿಂತ ಉತ್ತಮ ಗುಣಮಟ್ಟದ ಆಹಾರ ತಯಾರಿಸಿ ನೀಡಲು ಸಿದ್ಧ. ಇಂದಿರಾ ಕ್ಯಾಂಟಿನ್‌ನಲ್ಲಿ ಅವ್ಯವಹಾರದ ಕೂಗು ಕೇಳಿ ಬಂದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT