ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಧಾರ ಸಿದ್ದರಾಮೇಶ್ವರ ರಥೋತ್ಸವ

Published 24 ಫೆಬ್ರುವರಿ 2024, 14:54 IST
Last Updated 24 ಫೆಬ್ರುವರಿ 2024, 14:54 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಗಧಾರ ಗ್ರಾಮದಲ್ಲಿ ಶನಿವಾರ ನಿಜಗುರು ದತ್ತಾತ್ರೇಯ ಸಾಂಪ್ರದಾಯಸ್ಥ ಸಿದ್ಧರಾಮೇಶ್ವರ 72ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. 

ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆ ಪಲ್ಲಕ್ಕಿ ನಂದಿಕೋಲು ಸೇವೆ, ಕಳಸಾರೋಹಣ ಮತ್ತು ಮಹಾರಥೋತ್ಸವ ನಡೆಯಿತು.

ಶಾಸಕ ಬಸನಗೌಡ ದದ್ದಲ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದರು. ರಾತ್ರಿ ಪ್ರಸಾದ ವಿತರಣೆ ಮತ್ತು ಖಾದರ್ ದಾಸ್ ಪ್ರಭು ಮಂಜರ್ಲಾ ಕುಟುಂಬದಿಂದ ಭಜನೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT