ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಉಪವಾಸ ಮಾಡದೆ ಗರ್ಭಗುಡಿಗೆ ಹೋಗಿದ್ದರೆ ಅಪವಿತ್ರ: ವೀರಪ್ಪ ಮೊಯಿಲಿ

Published : 23 ಜನವರಿ 2024, 21:40 IST
Last Updated : 23 ಜನವರಿ 2024, 21:40 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ‘ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ಉಪವಾಸ ವ್ರತ ನಡೆಸಿದ್ದರು ಎನ್ನಲಾಗುತ್ತದೆ. ಆದರೆ, ನಾನು ವೈದ್ಯರನ್ನು ಈ ಬಗ್ಗೆ ಕೇಳಿದೆ. ಇಷ್ಟು ದಿನ ಉಪವಾಸ ಮಾಡಿದರೆ ಬದುಕಲು ಸಾಧ್ಯವಿಲ್ಲ ಎಂದರು. ಉಪವಾಸ ಮಾಡದೆ ಪ್ರಧಾನಿ ಗರ್ಭಗುಡಿ ಪ್ರವೇಶಿಸಿದ್ದರೆ ಅದು ಅಪವಿತ್ರವಾಗುತ್ತದೆ’ ಎಂದು ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪಿಸುತ್ತೇವೆ ಎಂದು ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರ ಪಡೆದರು. ಇನ್ನು ಮುಂದೆ ಬಿಜೆಪಿಯವರಿಗೆ ಹೇಳಲು ಯಾವುದೇ ವಿಷಯ ಇಲ್ಲ’ ಎಂದು ಟೀಕಿಸಿದರು.

‘ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ ಎಂದು ಈ ಹಿಂದೆ ದೇವೇಗೌಡ ಅವರು ಹೇಳಿದ್ದರು. ಆದರೆ, ಈಗ ಪುತ್ರ ಕುಮಾರಸ್ವಾಮಿ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿಸಲು ನರೇಂದ್ರ ಮೋದಿಯೇ ಪ್ರಧಾನಿಯಾಗುವರು ಎಂದು ಹೇಳುತ್ತಿದ್ದಾರೆ. ಆದರೆ, 2024ರ ಲೋಕಸಭೆ ಚುನಾವಣೆ ನಂತರ ನರೇಂದ್ರ ಮೋದಿ ಮಾಜಿ ಆಗುವರು’ ಎಂದರು.

‘ಹಿಂದುಳಿದವರು ಎಂಬ ಕಾರಣಕ್ಕೆ ಮೋದಿಗೆ ಅಪಮಾನ’: ಪ್ರಧಾನಿ ನರೇಂದ್ರಮೋದಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯಿಲಿ ಸೇರಿ ಇನ್ನಿತರ ನಾಯಕರು ನಿರಂತರ ಅಪಮಾನ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಹರಿಹಾಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT