ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: 51 ದತ್ತಿ ಪ್ರಶಸ್ತಿಗೆ ಆಯ್ಕೆ

Published 11 ಜನವರಿ 2024, 16:32 IST
Last Updated 11 ಜನವರಿ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2022ನೇ ಸಾಲಿನ 51 ವಿವಿಧ ದತ್ತಿ ಪ್ರಶಸ್ತಿಗಳಿಗೆ 57 ಬರಹಗಾರರನ್ನು ಆಯ್ಕೆ ಮಾಡಿದೆ.

2022ರ ಜನವರಿಯಿಂದ ಡಿಸೆಂಬರ್‌ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯದಿಂದ 4 ಸಾವಿರ ಕೃತಿಗಳು ಪ್ರಶಸ್ತಿಗೆ ಬಂದಿದ್ದವು. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದಲ್ಲಿ 25 ಜನ ಪರಿಣಿತರ ಸಮಿತಿ ದತ್ತಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿವೆ. ಈ ದತ್ತಿ ಪ್ರಶಸ್ತಿಗಳು ₹ 250ರಿಂದ ₹ 10 ಸಾವಿರದವರೆಗೆ ನಗದು ಬಹುಮಾನ ಹೊಂದಿವೆ. ಪ್ರಶಸ್ತಿಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಪರಿಷತ್ತು ತಿಳಿಸಿದೆ.

‘ಈ ಪುಸ್ತಕ ದತ್ತಿ ಪ್ರಶಸ್ತಿಗಳಿಂದ ಪುಸ್ತಕ ಸಂಸ್ಕೃತಿ ನಮ್ಮಲ್ಲಿ ಇನ್ನಷ್ಟು ಬೆಳೆಯಲಿದೆ. ಬರಹಗಾರರನ್ನು ಪ್ರೋತ್ಸಾಹಿಸಲು ಪರಿಷತ್ತಿನಲ್ಲಿ ಪುಸ್ತಕ ದತ್ತಿಗಳನ್ನು ಸ್ಥಾಪಿಸಬೇಕು. ಒಂದು ಲಕ್ಷ ರೂಪಾಯಿಗೆ ಕಡಿಮೆ ಇಲ್ಲದಂತೆ ಪರಿಷತ್ತಿನಲ್ಲಿ ದತ್ತಿ ಇಟ್ಟರೆ, ಅದರ ಬಡ್ಡಿಯಿಂದ ಪುಸ್ತಕ ಬಹುಮಾನ ನೀಡಬಹುದು. ಈ ಬಗ್ಗೆ ವಿವರವನ್ನು ಪರಿಷತ್ತಿನ ಕೇಂದ್ರ ಕಚೇರಿಯಿಂದ ಪಡೆಯಬಹುದು’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.

ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳು: ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ’ಗೆ ಮುಂಬೈನ ಶಾರದಾ ಎ. ಅಂಚನ್ ಅವರ ‘ರಕ್ತ ಶುದ್ಧಿ, ಆರೋಗ್ಯ ವೃದ್ಧಿ’, ‘ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಮೈಸೂರಿನ ಸುಕನ್ಯಾ ಸೂನಗಹಳ್ಳಿ ಅವರ ‘ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ’, ‘ಭಾರತಿ ಮೋಹನ ಕೋಟಿ ದತ್ತಿ’ಗೆ ಎಸ್.ಬಿ. ರಂಗನಾಥ ಅವರ ‘ಕಗ್ಗತ್ತಲ ಕಾಲ’, ‘ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿ’ಗೆ ಅಥಣಿಯ ಅಜಿತ ಮುರುಗುಂಡೆ ಅವರ ‘ರತ್ನಾಕರವರ್ಣಿಯ ಹಾಡುಗಳು ಸಾಹಿತ್ಯ ಮತ್ತು ತಾತ್ವಿಕತೆ’ ಕೃತಿ ಆಯ್ಕೆಯಾಗಿವೆ.

‘ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ’ಗೆ ಧಾರವಾಡದ ಶಾಂತಿನಾಥ ದಿಬ್ಬದ ಅವರ ‘ಅಭಿನವ ಪಂಪಭಾರತ’, ‘ವಸುದೇವ ಭೂಪಾಲಂ ದತ್ತಿ’ಗೆ ಮೂಡುಬಿದಿರೆಯ ಜಯಪ್ರಕಾಶ ಮಾವಿನಕುಳಿ ಅವರ ‘ಅನುರೂಪ’, ಬೆಂಗಳೂರಿನ ಎಸ್.ಜಿ. ಮಾಲತಿಶೆಟ್ಟಿ ಅವರ ‘ದಡ ಸೇರಿದ ದೋಣಿ’, ಹಾಸನದ ವತ್ಸಲೆ ಸುರೇಶ್ ಅವರ ‘ಕಪ್ಪೆ ಮದುವೆ’, ಬೆಂಗಳೂರಿನ ಸುಮಾ ಸತೀಶ್ ಅವರ ‘ಹಾದಿಯಲ್ಲಿ ಮುಳ್ಳುಗಳು’, ‘ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ’ಗೆ ಧಾರವಾಡದ ನಳಿನಿ ಟಿ. ಭೀಮಪ್ಪ ಅವರ ‘ಸೆಲ್ವಿ...’, ‘ಡಾ.ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ’ಗೆ ಉಡುಪಿಯ ವಿರೂಪಾಕ್ಷ ದೇವರಮನೆ ಅವರ ‘ಕ್ರಾಸ್ ರೋಡ್ಸ್ ಕಿಶೋರದ ಕವಲು ಹಾದಿ’, ‘ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ’ಗೆ ದಾವಣಗೆರೆಯ ಗಾಯಿತ್ರಿ ರಾಜ್ ಅವರ ‘ಟ್ರಾಯ್’, ‘ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ’ಗೆ ಬೆಂಗಳೂರಿನ ಎ.ಜಿ. ರತ್ನಕಾಳೇಗೌಡ ಅವರ ‘ಮಡಿಲ ಕೆಂಡ’ ಕೃತಿ ಭಾಜನವಾಗಿದೆ.

‘ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ’ಗೆ ಚಿಕ್ಕಮಗಳೂರಿನ ನಂರುಶಿ ಕಡೂರು ಅವರ ‘ಬೆಂಕಿ ಹರಿಸಿದ ನದಿ’, ‘ಅಮೃತ ಸಾಹಿತ್ಯ ಸವಿ ನೆನಪಿನ ದತ್ತಿಗೆ (ಎಲ್. ಬಸವರಾಜು ದತ್ತಿ) ಚಿಕ್ಕಬಳ್ಳಾಪುರದ ಕೆ.ಪಿ. ನಾರಾಯಣಪ್ಪ ಅವರ ‘ದಲಿತ ಚಳುವಳಿ’, ‘ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ’ಗೆ ತುಮಕೂರಿನ ಮಂಜುನಾಥ ಕುಣಿಗಲ್ ಅವರ ‘ಕುಣಿಗಲ್ ಕಂದಹಾರ್’, ‘ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿಗೆ ಕುಂದಾಪುರದ ಶಶಿಧರ ಹಾಲಾಡಿ ಅವರ ‘ಅಬ್ಬೆ’, ‘ಗೌರುಭಟ್ ದತ್ತಿ’ಗೆ ಉತ್ತರ ಕನ್ನಡದ ಗೀತಾ ವಸಂತ ಅವರ ‘ಅವಳ ಅರಿವು’, ‘ಗಂಗಮ್ಮ ಟಿ. ಶಿವಣ್ಣ ದತ್ತಿ’ಗೆ ಯಾದಗಿರಿಯ ಸಿದ್ದರಾಮ ಹೊನ್ಕಲ್ ಅವರ ‘ಸಡಗರದ ಅಚ್ಚಪ್ಪಗೌಡ ಸುಬೇದಾರರು’, ‘ಡಾ.ಹಾ.ಮಾ. ನಾಯಕ ಸ್ಮಾರಕ ದತ್ತಿ’ಗೆ ಬೆಳಗಾವಿಯ ಪಿ. ನಾಗರಾಜ್ ಅವರ ‘ಕನ್ನಡ ಸಂಸ್ಕೃತಿ: ಸಂವಹನ’, ‘ಡಾ. ವೀಣಾ ಶಾಂತೇಶ್ವರ ದತ್ತಿ’ಗೆ ಮಂಡ್ಯದ ದಯಾನಂದ ಅವರ ‘ಬುದ್ಧನ ಕಿವಿ’ ಕೃತಿ ಆಯ್ಕೆಯಾಗಿದೆ.

‘ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ’ಗೆ ತುಮಕೂರಿನ ವಿಜಯಾ ಮೋಹನ್ ಅವರ ‘ಮೇವು’, ‘ಪಳಕಳ ಸೀತಾರಾಮಭಟ್ಟ ದತ್ತಿ’ಗೆ ಬೆಂಗಳೂರಿನ ರಾಮಕೃಷ್ಣಯ್ಯ ಅವರ ‘ಮನಸ್ಸಿದ್ದರೆ ಮಾರ್ಗ’, ‘ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ’ಗೆ ವಿಜಯಪುರದ ಶಂಕರ ಬೈಚಬಾಳ ಅವರ ‘ಕೆಂಪು ಹುಡುಗಿ ಕಪ್ಪು ಕಾಲ್ಮರಿ’, ‘ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ ದತ್ತಿ’ಗೆ ಚಿಕ್ಕಮಗಳೂರಿನ ಶುಭಶ್ರೀ ಭಟ್ಟ ಅವರ ‘ಹಿಂದಿನ ನಿಲ್ದಾಣ’, ‘ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ’ಗೆ ಉಡುಪಿಯ ಆನಂದರಾಮ ಉಪಾಧ್ಯ ಅವರ ‘ಸೋಮೇಶ್ವರ ಶತಕ ಸೌರಭ’, ‘ಜಿ.ಆರ್. ರೇವಯ್ಯ ದತ್ತಿ’ಗೆ ಮೈಸೂರಿನ ಅಮ್ಮಸಂದ್ರ ಸುರೇಶ್ ಅವರ ‘ಮಹಾ ಮಾನವತಾವಾದಿ’, ‘ಆರ್.ಜೆ. ಗಲಗಲಿ ದತ್ತಿ’ಗೆ ಬೆಳಗಾವಿಯ ಸುರೇಶ ಮುದ್ದಾರ ‘ಅರಮನೆಯಿಂದ ಅರಿವಿನರಮನೆಗೆ’, ‘ಕಾಕೋಳು ಸರೋಜಮ್ಮ ದತ್ತಿ’ಗೆ ಕೋಲಾರದ ಅಮರೇಂದ್ರ ಹೊಲ್ಲಂಬಳ್ಳಿ ಅವರ ‘ಚಂದ್ರಗುಪ್ತ’, ‘ನಾ.ಕು. ಗಣೇಶ್ ದತ್ತಿ’ಗೆ ಕೊಪ್ಪಳದ ವೀರಪ್ಪ ಮಲ್ಲಪ್ಪ ನಿಂಗೋಜಿ ಅವರ ‘ಕರವೀರನ ಶಾಯಿರಿಗಳು’, ‘ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ’ಗೆ ಬೆಂಗಳೂರಿನ ಕಾಕೋಳು ಶೈಲೇಶ್ ಅವರ ‘ಮುತ್ತಿನ ಮುಕುಟ ಮಣಿ’ ಕೃತಿ ಆಯ್ಕೆಯಾಗಿದೆ.

‘ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ’ಗೆ ಹೊನ್ನಾಳಿಯ ಸದಾಶಿದ ಸೊರಟೂರು ಅವರ ‘ಅರ್ಧ ಬಿಸಿಲು ಅರ್ಧ ಮಳೆ’, ‘ಮಲ್ಲಿಕಾ ಪ್ರಶಸ್ತಿ ದತ್ತಿ’ಗೆ ಬೆಂಗಳೂರಿನ ನೂತನ ದೋಶೆಟ್ಟಿ ಅವರ ‘ಮಾತೆಂದರೆ ಏನು ಗೂಗಲ್?’, ಅಂತರರಾಷ್ಟ್ರೀಯ ಮಹಿಳಾ ವರ್ಷದ ‘ಮಹಿಳಾ ದತ್ತಿ’ಗೆ ಬೆಂಗಳೂರಿನ ಸಂಧ್ಯಾ ವಿ. ಅವರ ‘ಪ್ರಾಚೀನ ಕರ್ನಾಟಕದ ಮಹಿಳಾ ಲೋಕ’, ‘ ಶಾರದಾ ರಾಮಲಿಂಗಪ್ಪ ದತ್ತಿ’ಗೆ ಮುದ್ದೆ ಬಿಹಾಳದ ಚೈತ್ರಾ ಶಿವಯೋಗಿಮಠ ಅವರ ‘ಪೆಟ್ರಿಕೋರ್’, ‘ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ’ಗೆ ವಿಜಯಪುರದ ಸುರೇಖಾ ಜಿ. ರಾಠೋಡ ಅವರ ‘ಕ್ರೀಡಾ ಲೋಕದ ಮಹಿಳಾ ರತ್ನಗಳು’, ‘ನೀಲಗಂಗಾ ದತ್ತಿ’ಗೆ ಹಾಸನದ ವಿಜಯಲಕ್ಷ್ಮೀ ನುಗ್ಗೇಹಳ್ಳಿ ಅವರ ‘ಒಲವ ಸಿರಿ ಹೊತ್ತಿಗೆ’, ‘ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ’ಗೆ ಚಿಕ್ಕನಾಯಕನಹಳ್ಳಿಯ ಕೃಷ್ಣಾಬಾಯಿ ಹಾಗಲವಾಡಿ ಅವರ ‘ಧರ್ಮಸಂಸ್ಥಾನ ಹಾಗಲವಾಡಿ ಪಾಳೆಗಾರರು’ ಕೃತಿ ಭಾಜನವಾಗಿದೆ.

‘ಶಾರದಾ ಆರ್. ರಾವ್ ದತ್ತಿ’ಗೆ ಮಂಗಳೂರಿನ ದೀಪ್ತಿ ಎಸ್. ರಾವ್ ಅವರ ‘ಸಾವಿನಂಚಿನ ಸಂವಾದ’, ‘ಎಚ್. ಕರಿಯಣ್ಣ ದತ್ತಿ’ಗೆ ಮೈಸೂರಿನ ಪ್ರೇಮಕ್ಕ ಮಾದಪ್ಪ ಅವರ ‘ಬಯಲ ಬಾನಾಡಿಗಳು’, ‘ಡಾ. ಎಚ್. ನರಸಿಂಹಯ್ಯ ದತ್ತಿ’ಗೆ ಚಿಕ್ಕಮಗಳೂರಿನ ಕೆ. ಚಂದ್ರಮೌಳಿ ಅವರ ‘ತ್ರಿಪಥಗಾಮಿನಿ ಗಂಗಾ’, ‘ಕೆ.ವಿ. ರತ್ನಮ್ಮ ದತ್ತಿ’ಗೆ ಬೆಳಗಾವಿಯ ಇಂದಿರಾ ಮೋಟೆಬೆನ್ನೂರು ಅವರ ‘ಭಾವ ಬೆಳಗು’, ‘ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ’ಗೆ ಉತ್ತರ ಕನ್ನಡದ ಸುಚಿತ್ರ ಹೆಗಡೆ ಅವರ ‘ಜಗವ ಸುತ್ತುವ ಮಾಯೆ’, ಕೋಲಾರದ ಗುರುಮೂರ್ತಿ ಜಯಮಂಗಲ ಅವರ ‘ಉರಿವ ನೆಲದ ನೆರಳು’, ‘ಪಿ. ಶಾಂತಿಲಾಲ್ ದತ್ತಿ’ಗೆ ಹುಬ್ಬಳ್ಳಿಯ ಜೀವಂಧರಕುಮಾರ್ ಕೆ. ಹೋತಪೇಟೆ ಅವರ ‘ಸುನೀಲ ಪ್ರಾಕೃತ ಸಾಹಿತ್ಯ’ ಭಾಜನವಾಗಿದೆ.

‘ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ’ಗೆ ರಾಯಚೂರಿನ ಮಲ್ಲಪ್ಪ ಶಿವರಾಯಗೌಡ ಹರವಾಳ ಅವರ ‘ಜಾನಪದವೇ ಜ್ಞಾನಪದ’, ‘ಕುಂಬಾಸ ಪ್ರಶಸ್ತಿ ದತ್ತಿ’ಗೆ ಕೋಲಾರದ ಬಿ.ಪಿ. ನಾಗರಾಜ್ ಅವರ ‘ದಮಯಂತಿಯ ಡಯಟಿಂಗ್’, ‘ಪ್ರೊ.ಡಿ.ಸಿ. ಅನಂತಸ್ವಾಮಿ ದತ್ತಿ’ಗೆ ಬಾಗಲಕೋಟೆಯ ಎಂ.ಡಿ. ಚಿತ್ತರಗಿ ಅವರ ‘ಗಾಯಗೊಂಡಿವೆ ಬಣ್ಣ’, ‘ಸಿಸು ಸಂಗಮೇಶ ದತ್ತಿ’ಗೆ ದಾವಣಗೆರೆಯ ಸಂತೇಬೆನ್ನೂರು ಫೈಜ್ನಟ್ರಾಜ್ ಅವರ ‘ಮಗಳಿಗೆ ಹೇಳದ ಕಥೆಗಳು’, ‘ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ’ಗೆ ರಾಯಚೂರಿನ ಮಹಾದೇವ ಎಸ್. ಪಾಟೀಲ ಅವರ ಸುಡುವ ತಂಗಾಳಿ, ‘ಕೆ. ವಾಸುದೇವಾಚಾರ್ ದತ್ತಿ’ಗೆ ಮುಂಬೈನ ಅನಿತಾ ಪಿ. ತಾಕೊಡೆ ‘ನಿವಾಳಿಸಿ ಬಿಟ್ಟ ಕೋಳಿ’ ಕೃತಿ ಆಯ್ಕೆಯಾಗಿದೆ.

‘ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ’ಗೆ ಲೀಲಾವತಿ ಕೆ. ಕುಲಕರ್ಣಿ ಅವರ ಚಂಪಕಮಾಲೆ, ‘ಜಿ.ಪಿ. ರಾಜರತ್ನಂ ಸಂಸ್ಕರಣ ದತ್ತಿ’ಗೆ ಉಡುಪಿಯ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ‘ಬೆಳಕು ನೀಡುವ’ ಕೃತಿ, ‘ಡಾ.ಜಿ. ಚಂದ್ರಮೌಳೇಶ್ವರ ದತ್ತಿ’ಗೆ ಬೆಂಗಳೂರಿನ ವಿ.ವಿ. ಗೋಪಾಲ್ ಅವರ ‘ನಿತ್ಯ ಶಾಕುಂತಲೆ’, ‘ಬೋರಮ್ಮ ಗೋವಿಂದಪ್ಪ ದತ್ತಿ’ಗೆ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರ ‘ಮಸಣದ ದಾರಿ’ ಕೃತಿ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT