ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥ್ಯಕ್ಕೆ ಐಎಎಸ್‌: ಪರಿಷತ್‌ ಕಲಾಪ ಮೂರು ಬಾರಿ ಮುಂದೂಡಿಕೆ

Published 19 ಜುಲೈ 2023, 23:00 IST
Last Updated 19 ಜುಲೈ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷಗಳ ಮೈತ್ರಿಕೂಟದ ಸಭೆಗೆ ಬಂದಿದ್ದ ಪ್ರಮುಖರ ಆತಿಥ್ಯಕ್ಕೆ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದ ಪ್ರಕರಣ ಬುಧವಾರ ವಿಧಾನ ಪರಿಷತ್ತಿನಲ್ಲೂ ಪ್ರತಿಧ್ವನಿಸಿತು.

ವಿರೋಧ ಪಕ್ಷಗಳ ಸದಸ್ಯರು ನಿರಂತರ ಗದ್ದಲ ಎಬ್ಬಿಸಿ, ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕ್ಷಮೆಯಾಚನೆಗೆ ಪಟ್ಟುಹಿಡಿದರು. ಎರಡು ಬಾರಿ ಕಲಾಪ ಮುಂದೂಡಿದರೂ, ಮತ್ತೆ ಅದೇ ಸ್ಥಿತಿ ಮುಂದುವರಿಯಿತು. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

ಬಜೆಟ್‌ ಮೇಲಿನ ಚರ್ಚೆಯ ಮಧ್ಯೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಎನ್‌.ರವಿಕುಮಾರ್, ಶಶಿಲ್‌ ನಮೋಶಿ, ರಾಜಕೀಯ ಸಭೆಗೆ ಬಂದಿದ್ದ ಸಣ್ಣಪುಟ್ಟ ಪಕ್ಷಗಳ ನಾಯಕರಿಗೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರಿಗೆ ಆತಿಥ್ಯ ನೀಡಲು ರಾಜ್ಯದ 30 ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆತಿಥ್ಯಕ್ಕೆ ಸಿದ್ಧಪಡಿಸಿದ್ದ ರಾಜಕೀಯ ಪಕ್ಷಗಳ ನಾಯಕರ ಪಟ್ಟಿಯಲ್ಲಿ ಕೇರಳದ ಟಿ.ಜೆ.ಜೋಸೆಫ್‌ ಅವರನ್ನು ಕರ್ನಾಟಕದ ವಿಧಾನಸಭಾ ಸದಸ್ಯರೆಂದು ನಮೂದಿಸಲಾಗಿದೆ. ಇಂತಹ ಯಡವಟ್ಟು ಮಾಡಿ ರಾಜ್ಯದ ಮಾನ ಹರಾಜು ಹಾಕಲಾಗಿದೆ. ಆತಿಥ್ಯವಹಿಸಿಕೊಳ್ಳಲು ಹೋಗಿದ್ದ ಐಎಎಸ್‌ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ರವಿಕುಮಾರ್ ಒತ್ತಾಯಿಸಿದರು.

ವಿರೋಧ ಪಕ್ಷಗಳ ಸದಸ್ಯರ ಧಿಕ್ಕಾರಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಆಸ್ಟ್ರೇಲಿಯಾಗೆ ಉದ್ಯಮಿ ಅದಾನಿ ಕರೆದುಕೊಂಡು ಹೋದ ಮೋದಿ ವಿಷಯವನ್ನು ಸಚಿವ ಶರಣಪ್ರಕಾಶ ಪಟೀಲ ಪ್ರಸ್ತಾಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT