ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಛಾಯಾಚಿತ್ರ: ‘ಪ್ರಜಾವಾಣಿ’ಯ ಫಕ್ರುದ್ದೀನ್‌ ಪ್ರಥಮ

Published 27 ಮೇ 2024, 16:33 IST
Last Updated 27 ಮೇ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆ–2024ರ ಅಂಗವಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ವತಿಯಿಂದ ಮಾಧ್ಯಮ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ನ ಮಂಗಳೂರು ಛಾಯಾಗ್ರಾಹಕ ಎಚ್‌. ಫಕ್ರುದ್ದೀನ್‌ ಪ್ರಥಮ ಬಹುಮಾನ ಪಡೆದಿದ್ದಾರೆ.

ಬಾಗಲಕೋಟೆಯ ಇಂದ್ರಕುಮಾರ್ ಬಿ. ದಸ್ತೇನವರ (ದ್ವಿತೀಯ), ಮೂಡಬಿದರೆಯ ಜಿನೇಶ್ ಪ್ರಸಾದ್ (ತೃತೀಯ), ಉಡುಪಿಯ ಆಸ್ಟ್ರೋ ಮೋಹನ್‌, ಬೆಂಗಳೂರಿನ ಪೂರ್ಣಿಮಾ ರವಿ (ಸಮಾಧಾನಕರ), ಮೈಸೂರಿನ ಕೆ.ಎಚ್‌. ಚಂದ್ರು, ಕಲಬುರಗಿಯ ಶಿವಶರಣಪ್ಪ ಬೆನ್ನೂರ್ (ವಿಶೇಷ) ಬಹುಮಾನಗಳಿಗೆ ಭಾಜನರಾಗಿದ್ದಾರೆ.

ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ, ಸಮಾಧಾನಕರ  ₹3 ಸಾವಿರ ಹಾಗೂ ವಿಶೇಷ ಬಹುಮಾನ ₹2,500 ನಗದು ಪುರಸ್ಕಾರ ಒಳಗೊಂಡಿದೆ.

ಮಂಗಳೂರಿನ ಅತ್ತಾವರದ ಬಾಬುಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಥಾಮಿಕ ಶಾಲೆಯಲ್ಲಿ  ಸ್ಟೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಹಿರಿಯ ನಾಗರಿಕರೊಬ್ಬರಿಗೆ ಮತದಾನ ಮಾಡಲು ಸಹಾಯ ಮಾಡುತ್ತಿರುವುದು -ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್

ಮಂಗಳೂರಿನ ಅತ್ತಾವರದ ಬಾಬುಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಥಾಮಿಕ ಶಾಲೆಯಲ್ಲಿ  ಸ್ಟೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಹಿರಿಯ ನಾಗರಿಕರೊಬ್ಬರಿಗೆ ಮತದಾನ ಮಾಡಲು ಸಹಾಯ ಮಾಡುತ್ತಿರುವುದು -ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT