ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮೋದಿ ಶನಿಯಾಗಿ ಕಾಡಲಿದ್ದಾರೆ: ಬಸವರಾಜ ಬೊಮ್ಮಾಯಿ

Published 21 ಏಪ್ರಿಲ್ 2024, 15:25 IST
Last Updated 21 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ‘ಒಳ್ಳೆಯವರಿಗೆ ಒಳ್ಳೆಯದು ಮಾಡುವ ಮತ್ತು ಕೆಟ್ಟವರನ್ನು ಶಿಕ್ಷಿಸುವವನೇ ಶನಿ ದೇವ. ಮೋದಿಯವರು ಕಾಂಗ್ರೆಸ್‌ಗೆ ಶನಿಯಾಗಿ ಕಾಡಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.

ಮೋದಿ ಈ ದೇಶಕ್ಕೆ ಅಂಟಿದ ಶನಿ ಎಂದು ಕಾಂಗ್ರೆಸ್‌ ನಾಯಕ ರಮೇಶ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಮೇಶ್‌ಕುಮಾರ್ ಎಷ್ಟು ಸತ್ಯವಂತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೋದಿಯವರು ರಮೇಶ್‌ ಕುಮಾರ್‌ ಮತ್ತು ಕಾಂಗ್ರೆಸ್‌ಗೆ ಶನಿಯಾಗಿದ್ದಾರೆ’ ಎಂದರು.

‘ಯಾರು ಭ್ರಷ್ಟಾಚಾರ ಮಾಡುತ್ತಾರೆ. ಯಾರು ದೇಶ ವಿರೋಧಿ ಮತ್ತು ಜನ ವಿರೋಧಿ ಕೆಲಸ ಮಾಡುತ್ತಾರೋ ಅವರಿಗೆ ಮೋದಿಯವರು ಶನಿಯಾಗಿ ಕಾಡುತ್ತಾರೆ. ಶಿಕ್ಷೆ ಕೊಡುತ್ತಾರೆ. ರಮೇಶ್‌ಕುಮಾರ್ ಅವರಿಗೆ ಇದರ ಒಳ ಮರ್ಮಗೊತ್ತಿದೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT