ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಹರಿದು ಒಂದುವರೆ ವರ್ಷದ ಬಾಲಕ ಸಾವು: ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

Published 27 ಡಿಸೆಂಬರ್ 2023, 6:29 IST
Last Updated 27 ಡಿಸೆಂಬರ್ 2023, 6:29 IST
ಅಕ್ಷರ ಗಾತ್ರ

ಬೀದರ್‌: ದಂತ ವೈದ್ಯ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪರಿಣಾಮ ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹಾರೂರಗೇರಿ ಸಮೀಪದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರು ಮಂಗಳವಾರ ಸಂಜೆ ನಡೆದಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವಿಡಿಯೋ ಸಾಕಷ್ಟು ಹರಿದಾಡಿತು.

ಬಸವಚೇತನ ಮೃತ ಬಾಲಕ. 2024ರ ಜನವರಿ 9ಕ್ಕೆ ಬಾಲಕನಿಗೆ ಎರಡು ವರ್ಷ ತುಂಬುತ್ತಿತ್ತು. ವಕೀಲ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿಯ ಎರಡನೇ ಮಗ ಬಸವಚೇತನ ಮನೆ ಮುಂದೆ ಓಡಾಡುವಾಗ ಈ ಘಟನೆ ಸಂಭವಿಸಿದೆ.

ಆಗಿದ್ದೇನು?: ಹಾರೂರಗೇರಿಯಲ್ಲಿ ಸತೀಶ ಅವರ ಸಹೋದರಿಯ ಮನೆ ಇದೆ. ಆಗಾಗ ಅವರು ಸಹೋದರಿ ಮನೆಗೆ ಹೋಗಿ ಬರುತ್ತಿರುತ್ತಾರೆ. ಮಂಗಳವಾರ ಕೂಡ ಅಲ್ಲಿಗೆ ಹೋಗಿದ್ದರು. ಸತೀಶ ಸಹೋದರಿ ಸಂಬಂಧಿಕರನ್ನು ಬೀಳ್ಕೊಟ್ಟು ಮನೆಯೊಳಗೆ ಬಂದಿದ್ದರು. ಅವರನ್ನು ಹುಡುಕಿಕೊಂಡು ಚಾಕೊಲೇಟ್‌ ತಿನ್ನುತ್ತ ಬಸವಚೇತನ ಮನೆ ಹೊರಗೆ ಹೋಗಿದ್ದ. ಒಂದು ಬದಿ ನಿಂತಿದ್ದ ಕಾರಿನಿಂದ ಮತ್ತೊಂದು ಕಡೆಗೆ ಬಾಲಕ ನಿಧಾನವಾಗಿ ಹೋಗುತ್ತಿದ್ದ. ಈ ವೇಳೆ ದಂತ ವೈದ್ಯ ಡಾ. ಸುನೀಲ ಭಂಡಾರಿ ಅವರ ಇನ್ನೋವಾ ಕಾರು ಬಾಲಕನ ತಲೆಯ ಮೇಲಿಂದ ಹಾಯ್ದು ಹೋಗಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.

‘ಬಾಲಕ ಸಹಜ ರೀತಿಯಲ್ಲಿ ಓಡಾಡಿಕೊಂಡಿದ್ದ. ಮನೆ ಎದುರು ನಿಧಾನ ಗತಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ. ಡಾ.ಸುನೀಲ ಭಂಡಾರಿ ಅವರು ಓಡಿಸುತ್ತಿದ್ದ ಇನ್ನೋವಾ ಕಾರು ಕೂಡ ನಿಧಾನ ಗತಿಯಲ್ಲಿ ಚಲಿಸುತ್ತಿತ್ತು. ದೂರದಿಂದ ಬಾಲಕನ ಓಡಾಟ ಗಮನಿಸಿ ಕಾರು ನಿಲ್ಲಿಸಬಹುದಿತ್ತು. ಆದರೆ, ಅದನ್ನು ಗಮನಿಸದೆ ನಿರ್ಲಕ್ಷ್ಯದಿಂದ ಕಾರು ಓಡಿಸಿದ್ದಾರೆ. ಇದರ ಪರಿಣಾಮ ಬಸವಚೇತನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಪೊಲೀಸ್‌ ಠಾಣೆಗೆ ದೂರು ಕೊಡಲಾಗಿದೆ’ ಎಂದು ಬಾಲಕನ ಸಂಬಂಧಿ ಹಾವಶೆಟ್ಟಿ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT