ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗಾಂಧಿ ಮಾರ್ಗ’ದಿಂದಲೇ ಶಾಂತಿ, ಸೌಹಾರ್ದ

ಸರ್ವೋದಯ ದಿನಾಚರಣೆಯಲ್ಲಿ ಜಿ.ಎಸ್‌.ಜಯದೇವ ಅಭಿಮತ
Published 30 ಜನವರಿ 2024, 16:30 IST
Last Updated 30 ಜನವರಿ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಬಹುದೊಡ್ಡ ಶಕ್ತಿಯಾದ ಯುವಪೀಳಿಗೆ ‘ಗಾಂಧಿ ಮಾರ್ಗ’ ಅನುಸರಿಸಿದರೆ ದೇಶದಲ್ಲಿ ಶಾಂತಿ, ಸೌಹಾರ್ದ ಸದಾ ನೆಲೆಸುತ್ತದೆ ಎಂದು ದೀನಬಂಧು ಸೇವಾ ಸಂಸ್ಥೆಯ ಸ್ಥಾಪಕ ಜಿ.ಎಸ್‌.ಜಯದೇವ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವ ಜನರು ಭಾರತದಲ್ಲಿ ಇದ್ದಾರೆ. ಹಾಗಾಗಿ, ನಮ್ಮದು ‘ಯಂಗ್‌ ಇಂಡಿಯಾ’. ದೇಶದ ಪ್ರತಿ ಮಕ್ಕಳು, ಯುವ ಜನರಿಗೂ ಗಾಂಧಿ ತತ್ವ, ಅವುಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸುವ ಕೆಲಸ ಆಗಬೇಕು. ಬಾಲ್ಯದಿಂದಲೇ ಮನಸ್ಸಲ್ಲಿ ಬಿತ್ತಬೇಕು. ಅವರು ದೊಡ್ಡವರಾದಂತೆ ಸಹಜವಾಗಿ ಗಾಂಧಿ ಮಾರ್ಗದಲ್ಲಿ ನಡೆಯುತ್ತಾರೆ ಎಂದರು. 

ಶಿಕ್ಷಣ ತಜ್ಞ ಎಚ್‌.ಎನ್‌.ಮುರಳೀಧರ್ ಮಾತನಾಡಿ, ಗಾಂಧೀಜಿ ಹುತಾತ್ಮರಾದರೂ, ಗಾಂಧಿ ಚಿಂತನೆಗಳು ದೇಶ–ವಿದೇಶಗಳಲ್ಲೂ ಅವರನ್ನು ಜೀವಂತವಾಗಿರಿಸಿವೆ. ಹುತಾತ್ಮರ ದಿನ ಅವರ ಸ್ಮರಣೆ ಮಾಡಿದರಷ್ಟೇ ಸಾಲದು, ಪ್ರತಿಯೊಬ್ಬರೂ ಅವರ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕಥಾ ನಿರೂಪಕ ವಿಕ್ರಂ ಶ್ರೀಧರ್, ಗಾಂಧಿ ಕಥೆಗಳ ಮೂಲಕ ಮಕ್ಕಳಿಗೆ ಅವರ ಜೀವನದ ಮೌಲ್ಯಗಳನ್ನು ಹೇಳಿದರು. ಗಾಂಧಿ ಸ್ಮಾರಕ ನಿಧಿಯ ಖಜಾಂಚಿ ಎಚ್‌.ಬಿ.ದಿನೇಶ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಶುಕುಮಾರ್, ಕಾರ್ಯದರ್ಶಿ ಎಂ.ಸಿ.ನರೇಂದ್ರ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಅಧಿಕಾರಿ ಎಚ್‌.ಜಿ.ಗೋವಿಂದೇಗೌಡ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT