ನಂಜನಗೂಡು: ಪಟ್ಟಣದ ಹೊರವಲಯದ ಗುಡಿಸಲಿನಲ್ಲಿ 12 ವರ್ಷದ ಬಾಲಕಿ ಮೇಲೆ ದುಷ್ಕರ್ಮಿಗಳು ಶುಕ್ರವಾರ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.
ಬಾಲಕಿಯ ತಂದೆ, ತಾಯಿ ಪಾದಚಾರಿ ಮಾರ್ಗದಲ್ಲಿ ತಳ್ಳು ಗಾಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು.
ಶಾಲೆ ಮುಗಿದ ಬಳಿಕ ಬಾಲಕಿ ಒಬ್ಬಳೇ ಮನೆಯಲ್ಲಿರುತ್ತಿದ್ದಳು. ಹೋಟೆಲ್ ವ್ಯಾಪಾರ ಮುಗಿಸಿ ರಾತ್ರಿ ತಂದೆ, ತಾಯಿ ಮನೆಗೆ ಬಂದಾಗ ಬಾಲಕಿ ಕೊಲೆಯಾಗಿರುವುದು ಗೊತ್ತಾಗಿದೆ. ಬಾಲಕಿಯ ಮೈಮೇಲೆ ಕಚ್ಚಿರುವ ಗಾಯದ ಗುರುತುಗಳು ಪತ್ತೆಯಾಗಿವೆ.