ವಿವಿ ಸ್ಥಾಪನೆಯ ನಂತರ ಕೃತಕ ಬುದ್ಧಿಮತ್ತೆ ಸೇರಿದಂತೆ ಹತ್ತು ಹಲವು ಹೊಸ ಬಗೆಯ ಕೋರ್ಸ್‌ಗಳು ಆರಂಭವಾಗಿವೆ. ಬಹುಬೇಡಿಕೆ ಇದ್ದು ಕಡಿಮೆ ಶುಲ್ಕಕ್ಕೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದರೆ ಸಂಶೋಧನೆಗಳು ಸ್ಥಗಿತವಾಗಿವೆ.
ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆ ನೀಡುವ ಹಾಗೂ ಅಧ್ಯಾಪಕರನ್ನು ವಿಲೀನಗೊಳಿಸುವ ಪ್ರಕ್ರಿಯೆಯ ಕಡತವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ಶೀಘ್ರ ಜಾರಿಯಾಗಲಿದೆ
ಎಂ.ಎಸ್. ಶ್ರೀಕರ್ ಪ್ರಧಾನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ
ಬೋಧಕೇತರರು ಪೂರಾ ಖಾಲಿ!
ವಿಶ್ವವಿದ್ಯಾಲಯ ಸ್ಥಾಪನೆಯಾದಾಗ 153 ಬೋಧಕೇತರ ಸಿಬ್ಬಂದಿ ಇದ್ದರು. ಅವರೆಲ್ಲರನ್ನೂ ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಬೇರೆಬೇರೆ ಪದವಿ ಕಾಲೇಜುಗಳಿಗೆ ವರ್ಗಾವಣೆ ಮಾಡಿತು. ಇಲ್ಲಿಯವರೆಗೂ ಹೊಸ ನೇಮಕಾತಿ ನಡೆದಿಲ್ಲ. ಹೊರಗುತ್ತಿಗೆ ಸಿಬ್ಬಂದಿಯೇ ಬೋಧಕೇತರ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.