ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಸ್ಥಳ: ಫೆಬ್ರುವರಿಯಲ್ಲಿ ಮಹಾಮಸ್ತಕಾಭಿಷೇಕ

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪ್ರಕಟಣೆ
Last Updated 10 ಸೆಪ್ಟೆಂಬರ್ 2018, 14:16 IST
ಅಕ್ಷರ ಗಾತ್ರ

ಉಜಿರೆ: ‘ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಇರುವ ಭಗವಾನ್ ಬಾಹುಬಲಿ ಸ್ವಾಮಿಗೆ 2019ರ ಫೆಬ್ರುವರಿ ತಿಂಗಳಿನಲ್ಲಿ 4ನೇ ಮಹಾಮಸ್ತಕಾಭಿಷೇಕ ನಡೆಯಲಿದೆ’ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೋಮವಾರ ಪ್ರಕಟಿಸಿದರು.

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಪೂರ್ವ ಸಿದ್ಧತೆಗಳ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶ್ರವಣಬೆಳಗೊಳದಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿರುವ ವರ್ಧಮಾನ ಸಾಗರ್ಜಿ ಮುನಿ ಮಹಾರಾಜ್‌ ಹಾಗೂ ಪುಷ್ಪದಂತ ಸಾಗರ ಮುನಿಮಹಾರಾಜ್‌ ಅವರ ಉಪಸ್ಥಿತಿಯಲ್ಲಿ ಸರಳವಾಗಿ ಮಸ್ತಕಾಭಿಷೇಕ ನಡೆಯಲಿದೆ. ಉತ್ತರ ಭಾರತದವರನ್ನೂ ಆಮಂತ್ರಿಸಲಾಗುವುದು. ರಾಜ್ಯದ ಎಲ್ಲಾ ಜೈನಮಠಗಳ ಭಟ್ಟಾರಕರುನ್ನು ಆಹ್ವಾನಿಸಲಾಗುವುದು. ಪಂಚಕಲ್ಯಾಣದ ಬಳಿಕ ಮೂರು ದಿನ ನಿರಂತರ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಮಸ್ತಕಾಭಿಷೇಕ ನಡೆಯುತ್ತದೆ. ಮಹಿಳೆಯರು ಹಾಗೂ ಯುವಜನತೆ ಮಸ್ತಕಾಭಿಷೇಕದಲ್ಲಿ ಸಕ್ರಿಯವಾಗಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಬೇಕು ಎಂದರು.

ಕಾರ್ಕಳದ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.

ಬೆಂಗಳೂರಿನ ಭಾರತೀಯ ಜೈನ್ ಮಿಲನ್ ಉಪಾಧ್ಯಕ್ಷ ಎಂ.ಎಸ್. ಮೃತ್ಯುಂಜಯ, ಹುಬ್ಬಳ್ಳಿಯ ದತ್ತಾ ದೋರ್ಲ, ಬೆಳಗಾವಿಯ ರಾಜು ದೊಡ್ಡಣ್ಣವರ್, ಪ್ರೇಮ್ ಕುಮಾರ್ ಜೈನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಂಗಳೂರಿನ ಡಾ. ಸಿ.ಕೆ. ಬಳ್ಳಾಲ್, ಬೆಂಗಳೂರಿನ ಕರ್ನಾಟಕ ಜೈನ್ ಅಸೋಸಿಯೇಶನ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ ಮಾತನಾಡಿದರು. ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಸಂಚಾಲಕರಾಗಿ ಡಿ. ಸುರೇಂದ್ರ ಕುಮಾರ್, ಸಂಚಾಲಕರಾಗಿ ಡಿ. ಹರ್ಷೇಂದ್ರ ಕುಮಾರ್ ಹಾಗೂ ಕೆ. ಮಹಾವೀರ ಅಜ್ರಿ ಮತ್ತು ಎ.ವಿ. ಶೆಟ್ಟಿ ಅವರನ್ನು ಕಾರ್ಯದರಶಿಗಳಾಗಿ ಆಯ್ಕೆ ಮಾಡಲಾಯಿತು.

ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಡಾ. ಬಿ. ಯಶೋವರ್ಮ, ಡಾ. ಟಿ. ನಾಗಕುಮಾರ ಶೆಟ್ಟಿ, ಶ್ರೇಯಸ್ ಡಿ. ಆನಡ್ಕ ದಿನೇಶ್ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ, ಪ್ರೊ. ಎಸ್. ಪ್ರಭಾಕರ್ , ಕೆ. ಮಹಾವೀರ ಅಜ್ರಿ , ಸುಭಾಶ್ಚಂದ್ರ ಜೈನ್ ಇದ್ದರು. ಶಿಶಿರ್ ಇಂದ್ರ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಬಾಹುಬಲಿ ಸ್ವಾಮಿಯ ಪ್ರಾರ್ಥನೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT