ಬಾಗಲಕೋಟೆ: ರಾಜ್ಯಸಭೆ ಮಾಜಿ ಸದಸ್ಯ ದಿವಂಗತ ಆರ್.ಎಂ. ದೇಸಾಯಿ ಪತ್ನಿ ಶಾಂತಾಬಾಯಿ (90) ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಮಧ್ಯಾಹ್ನ ನಿಧನರಾದರು.
ಬೀಳಗಿ ತಾಲೂಕಿನ ಯಡಹಳ್ಳಿ ದೇಸಗತಿ ಮನೆತನದ ಶಾಂತಾಬಾಯಿ ಅವರಿಗೆ ಪರಿಸರ ತಜ್ಞಡಾ. ಎಂ.ಆರ್. ದೇಸಾಯಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಯಡಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.