ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: 24ಕ್ಕೆ ಅರ್ಹರ ಅಂತಿಮ ಪಟ್ಟಿ

Published 18 ಏಪ್ರಿಲ್ 2024, 15:31 IST
Last Updated 18 ಏಪ್ರಿಲ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು–ಮುಖ್ಯ ಶಿಕ್ಷಕರ ವರ್ಗಾವಣೆಗೆ ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿ ಇದೇ 24ರಂದು ಪ್ರಕಟವಾಗಲಿದೆ. 

ಒಂದೇ ಸ್ಥಳ–ಒಂದೇ ಹುದ್ದೆಯಲ್ಲಿ ಕನಿಷ್ಠ ಮೂರು ಹಾಗೂ ಗರಿಷ್ಠ ಐದು ವರ್ಷ ಪೂರೈಸಿದ (ಇದೇ ಮೇ 31ಕ್ಕೆ ಅನ್ವಯವಾಗುವಂತೆ) ಶಿಕ್ಷಕರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಸೇವಾ ವಿವರಗಳನ್ನು ಪಡೆದು, ಸೇವಾ ಪುಸ್ತಕದ ವಿವರಗಳನ್ನು ಪರಿಶೀಲಿಸಿದ ನಂತರ ಇದೇ 19ರ ಒಳಗೆ ಅಪ್‌ಲೋಡ್‌ ಮಾಡುವರು. 20ರಂದು ತಾತ್ಕಾಲಿಕ ಕರಡು ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು 22ರ ಒಳಗೆ ಸಲ್ಲಿಸಬೇಕು.

23ರಂದು ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ 24ರಂದು ವಲಯವಾರು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಶೇ 4ರಷ್ಟು (ಶೈಕ್ಷಣಿಕ ತಾಲ್ಲೂಕಿನ ಒಳಗೆ) ವಲಯವಾರು, ಜಿಲ್ಲೆಯ ಒಳಗೆ ಶೇ 7ರಷ್ಟು ಕೋರಿಕೆ ವರ್ಗಾವಣೆ, ಶೇ 2ರಷ್ಟು ವಿಭಾಗವಾರು ವರ್ಗಾವಣೆ, ವಿಭಾಗದ ಹೊರಗೆ ಶೇ 2ರಷ್ಟು ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆ ಆರಂಭವಾಗುವ ಮೇ 29ರ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಆಯುಕ್ತೆ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT