ಅವರು ನನಗೆ ಅಣ್ಣ ಮಾತ್ರ ಆಗಿರಲಿಲ್ಲ. ನನಗೆ ತಂದೆಯೂ ಆಗಿದ್ದರು.
ಸಣ್ಣ ವಯಸ್ಸಿನಲ್ಲೇ ತಂದೆ ತೀರಿಕೊಂಡಾಗ ನನ್ನನ್ನು ಚೆನ್ನಾಗಿ ನೋಡಿಕೊಂಡರು. ನಾನು ವೈದ್ಯಕೀಯ ವೃತ್ತಿ ಆಯ್ದುಕೊಂಡಾಗ ನನ್ನನ್ನು ಕರೆದು ಬರಿ ಹಣಕ್ಕಾಗಿ ವೃತ್ತಿ ಮಾಡಬೇಡ. ಮೌಲ್ಯಾಧಾರಿತ ಜೀವನ ನಡೆಸು ಎಂದು ಬೆನ್ನುತಟ್ಟಿದ್ದರು. ನೈತಿಕವಾಗಿ ಶಕ್ತಿ ತುಂಬಿದ್ದರು.
ಹಾಗಾಗಿ, ಅಣ್ಣ ಹೇಳಿದಂತೆ ಇಂದಿಗೂ ನಡೆಯಲು ಸಾಧ್ಯವಾಗಿದೆ.