ಪಲ್ಲಕೆಲೆ: ಇಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ನ ಸಿ ಗುಂಪಿನ ಐರ್ಲೆಂಡ್ ಹಾಗೂ ಜಿಂಬಾಂಬ್ವೆ ತಂಡಗಳ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪಂದ್ಯವು ಒಂದೂ ಎಸೆತವನ್ನೂ ಕಾಣದೆ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಿಕೊಂಡವು.

ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಓಮಾನ್ ತಂಡಗಳ ವಿರುದ್ಧ ಗೆಲುವು ಸಾಧಿಸಿದ್ದ ಜಿಂಬಾಂಬ್ವೆ ತಂಡ ಸಿ ಗುಂಪಿನಲ್ಲಿ 4 ಅಂಕ ಪಡೆದು ಎರಡನೇ ಸ್ಥಾನದಲ್ಲಿತ್ತು. ಉಳಿದ 2 ಪಂದ್ಯಗಳಿಂದ ಒಂದನ್ನು ಗೆದ್ದರೂ ಅಥವಾ ಒಂದು ಪಂದ್ಯ ರದ್ದಾಗಿ ಒಂದು ಅಂಕ ಸಿಕ್ಕರೂ ಜಿಂಬಾಂಬ್ವೆ ತಂಡ ಸೂಪರ್–8 ಹಂತವನ್ನು ತಲುಪಲಿತ್ತು. ಅದೃಷ್ಟವಶಾತ್ ಐರ್ಲೆಂಡ್ ಎದುರಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, 5 ಅಂಕಗಳೊಂದಿಗೆ ಸೂಪರ್–8ರ ಹಂತವನ್ನು ಪ್ರವೇಶಿಸಿದೆ.

ಆಸ್ಟ್ರೇಲಿಯಾಗೆ ಆಘಾತ

ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಈ ಬಾರಿಯ ಟೂರ್ನಿ ಆರಂಭಕ್ಕೂ ಮೊದಲು ಗಾಯದ ಸಮಸ್ಯೆ ಕಾಂಗರೂಗಳ ತಂಡವನ್ನು ಕಾಡಿತ್ತು. ಟೂರ್ನಿ ಆರಂಭಕ್ಕೂ ಮೊದಲು ಪ್ರಮುಖ ವೇಗಿ ಜೋಶ್ ಹ್ಯಾಜಲ್ವುಡ್ ಹೊರಬಿದ್ದಿದ್ದರು. ಟೂರ್ನಿಯ ಮೊದಲ ಪಂದ್ಯಕ್ಕೂ ಮುನ್ನ ನಾಯಕ ಪ್ಯಾಟ್ ಕಮಿನ್ಸ್ ಕೂಡ ತಂಡದಿಂದ ಹೊರಬಿದ್ದಿದ್ದರು.

ಅದಾಗ್ಯೂ, ಸಿ ಗುಂಪಿನಲ್ಲಿ ಬಲಿಷ್ಠ ತಂಡವಾಗಿದ್ದ ಆಸ್ಟ್ರೇಲಿಯಾ ಸೂಪರ್–8ರ ಹಂತವನ್ನು ಪ್ರವೇಶಿಸಲಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿತ್ತು.
.T20 World Cup 2026: 17ನೇ ತಂಡವಾಗಿ ವಿಶ್ವಕಪ್ಗೆ ಅರ್ಹತೆ ಪಡೆದ ಜಿಂಬಾಂಬ್ವೆ.T20 World Cup: ಲೀಗ್ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?.
ಆದರೆ, ಆಸ್ಟ್ರೇಲಿಯಾ ತಂಡವು ಲೀಗ್ ಮಾದರಿಯಲ್ಲಿ ನೀರಸ ಪ್ರದರ್ಶನ ತೋರಿತು. ಜಿಂಬಾಂಬ್ವೆ ಹಾಗೂ ಶ್ರೀಲಂಕಾ ತಂಡಗಳ ಎದುರು ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ. ಆಸ್ಟ್ರೇಲಿಯಾ ತಂಡಕ್ಕೆ ಲೀಗ್ ಹಂತದಲ್ಲಿ ಓಮಾನ್ ವಿರುದ್ಧದ ಪಂದ್ಯ ಬಾಕಿ ಉಳಿದಿದ್ದು, ಪಂದ್ಯದ ಫಲಿತಾಂಶ ಏನೇ ಬಂದರು ಅಂಕಪಟ್ಟಿಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.