ಚೆನ್ನೈ: ಕೆನಡಾ ತಂಡದ ಆರಂಭಿಕ ಬ್ಯಾಟರ್ 19 ವರ್ಷದ ಯುವರಾಜ್ ಸಾಮ್ರಾ ಟಿ20 ವಿಶ್ವಕಪ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬಲಿಷ್ಠ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಲೀಗ್ ಹಂತದ ಪಂದ್ಯದಲ್ಲಿ ಕೆನಡದ ಯುವ ಬ್ಯಾಟರ್ 58 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ಪಾಕ್ ಬ್ಯಾಟರ್ ದಾಖಲೆ ಮುರಿದ ಯುವರಾಜ್

ಯುವರಾಜ್ ಸಮ್ರಾ ಅವರಿಗೆ ಸದ್ಯ 19 ವರ್ಷ 141 ದಿನಗಳು, ಆ ಮೂಲಕ ಐಸಿಸಿ ಟಿ20 ವಿಶ್ವಕಪ್ನಲ್ಲಿ ಶತಕ ಸಿಡಿಸಿದ ಅತೀ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನದ ಅಹ್ಮದ್ ಶೆಹಜಾದ್ ಅವರ ಹೆಸರಿನಲ್ಲಿತ್ತು. ಅವರು 22 ವರ್ಷದ 127 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

ಇದರ ಜೊತೆಗೆ ಪುರುಷರ ಟಿ20 ವಿಶ್ವಕಪ್ನಲ್ಲಿ ಶತಕ ದಾಖಲಿಸಿದ ಐಸಿಸಿ ಅಸೋಸಿಯೇಟ್ ರಾಷ್ಟ್ರದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಬಲಿಷ್ಠ ನ್ಯೂಜಿಲೆಂಡ್ ತಂಡದ ಬೌಲರ್ಗಳ ಮೇಲೆ ಸವಾರಿ ಮಾಡಿದ ಯುವರಾಜ್ ಸಮ್ರಾ 65 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ 110 ರನ್ ಬಾರಿಸಿದರು.

ಪುರುಷರ ಟಿ20 ವಿಶ್ವಕಪ್ನಲ್ಲಿ ಶತಕ ಸಿಡಿಸಿದ ಕಿರಿಯ ಆಟಗಾರರು

ಯುವರಾಜ್ ಸಾಮ್ರಾ– 19 ವರ್ಷ 141 ದಿನಗಳು (ಕೆನಡಾ), ನ್ಯೂಜಿಲೆಂಡ್ ವಿರುದ್ಧ

ಅಹ್ಮದ್ ಶೆಹಜಾದ್–22 ವರ್ಷ 127ದಿನಗಳು (ಪಾಕಿಸ್ತಾನ) ಬಾಂಗ್ಲಾ ವಿರುದ್ಧ

ಸುರೇಶ್ ರೈನಾ– 23 ವರ್ಷ 156 ದಿನಗಳು (ಭಾರತ) ದಕ್ಷಿಣ ಆಫ್ರಿಕಾ ವಿರುದ್ಧ

ಅಲೆಕ್ಸ್ ಹೆಲ್ಸ್– 25 ವರ್ಷ 83 ದಿನಗಳು - (ಇಂಗ್ಲೆಂಡ್) ಶ್ರೀಲಂಕಾ ವಿರುದ್ಧ

ಯಾರು ಯುವರಾಜ್ ಸಾಮ್ರಾ?

ಯುವರಾಜ್ ಸಾಮ್ರಾ ಮೂಲತಃ ಪಂಜಾಬ್ನವರು. 2025ರ ಮಾರ್ಚ್ನಿಂದ ಕೆನಡಾ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದಾರೆ.

ಸಾಮ್ರಾ ಅವರ ತಂದೆ 2007 ಮತ್ತು 2011 ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರ ದೊಡ್ಡ ಅಭಿಮಾನಿ. ಆ ಕಾರಣಕ್ಕಾಗಿಯೆ ಸಾಮ್ರಾ ಅವರಿಗೆ ಯುವರಾಜ್ ಸಾಮ್ರಾ ಎಂದು ಹೆಸರು ಇಟ್ಟಿದ್ದಾರೆ. ಒಂಟಾರಿಯೊದ ಬ್ರಾಂಪ್ಟನ್ನಲ್ಲಿ ಜನಿಸಿದ ಸಾಮ್ರಾ ಅವರನ್ನು ಎಡಗೈ ಬ್ಯಾಟರ್ ಆಗುವಂತೆ ಮಾಡಿದ್ದು ಅವರ ತಂದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಒಂದೇ ವರ್ಷದಲ್ಲಿ ಟಿ20 ವಿಶ್ವಕಪ್ ಆಡಿರುವ ಅವರು ಚೆನ್ನೈನಲ್ಲಿ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಕೆಚ್ಚೆದೆಯ ಶತಕ ಸಿಡಿಸಿ ಮಿಂಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.