ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅಧಿಕ ಲಾಭ
Published 16 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ವೇಗ ಹಾಗೂ ಕೆಲ ವೈಮನಸ್ಸುಗಳು ತಂದೆಯ ತಿಳಿವಳಿಕೆ ನುಡಿಯಿಂದ ದೂರಾಗುವುದು. ಆರಿಸಿಕೊಂಡ ಮಾರ್ಗದಲ್ಲಿ ಸರಿ ಬಗ್ಗೆ ಯೋಚಿಸಿ ಏಕಾಗ್ರತೆಯಿಂದ ಮುನ್ನಡೆಯಿರಿ.
16 ಫೆಬ್ರುವರಿ 2026, 22:30 IST
ವೃಷಭ
ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕಕ್ಕೆ ಕಾರಣವಾಗಬೇಕಿಲ್ಲ. ಆಫೀಸಿನ ಕೆಲಸಗಳು ಬೇಗನೇ ಮುಗಿಸಿ. ಪರೀಕ್ಷಾ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಕೆಲಸವನ್ನು ಪರೀಕ್ಷಿಸಬಹುದು.
16 ಫೆಬ್ರುವರಿ 2026, 22:30 IST
ಮಿಥುನ
ಆಟಿಕೆಗಳ ಮಾರಾಟದವರಿಗೆ ಮತ್ತು ಉಡುಗೊರೆ ವಸ್ತುಗಳ ಮಾರಾಟಗಾರರಿಗೆ ಉತ್ತಮ ಮಾರಾಟ ಹಾಗೂ ಲಾಭವಿರುವುದು. ಉನ್ನತ ಶಿಕ್ಷಣದವರಿಗೆ ಕೀರ್ತಿ ಮತ್ತು ಸಾಮಾಜಿಕ ಗೌರವ ಪ್ರಾಪ್ತಿ.
16 ಫೆಬ್ರುವರಿ 2026, 22:30 IST
ಕರ್ಕಾಟಕ
ನಿಯೋಜಿತ ಕೆಲಸಗಳನ್ನು ಉತ್ಸಾಹದಿಂದ ಮಾಡಿ ಮುಗಿಸುವಿರಿ. ಇನ್ನೊಂದು ಹೊಸ ಕೆಲಸ ನಿಮಗಾಗಿ ಕಾದಿರಲಿದೆ. ಮೇಧಾಕರ ದಕ್ಷಿಣಾಮೂರ್ತಿಯ ಆರಾಧನೆ ಸುಲಭವಾಗಿ ಯಶಸ್ಸಿನ ದಾರಿ ತೋರಿಸಲಿದೆ.
16 ಫೆಬ್ರುವರಿ 2026, 22:30 IST
ಸಿಂಹ
ಭೂ ಖರೀದಿಯಂಥ ಅಥವಾ ಗೃಹ ನಿರ್ಮಾಣ ಕಾರ್ಯದಂಥ ಕನಸಿನ ಯೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಸಹಚರರಿಂದ ಅಥವಾ ಅಧಿಕಾರಿಗಳಿಂದ ಅಸಹಕಾರದ ಪರಿಸ್ಥಿತಿ ಎದುರಾಗಬಹುದು.
16 ಫೆಬ್ರುವರಿ 2026, 22:30 IST
ಕನ್ಯಾ
ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಡಿ. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು.
16 ಫೆಬ್ರುವರಿ 2026, 22:30 IST
ತುಲಾ
ಆತ್ಮೀಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸಲಾಗದೇ ಬಿಡಲೂ ಆಗದೇ ಚಡಪಡಿಸುವ ಪರಿಸ್ಥಿತಿ ನಿಮ್ಮದಾಗುತ್ತದೆ. ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ.
16 ಫೆಬ್ರುವರಿ 2026, 22:30 IST
ವೃಶ್ಚಿಕ
ಸಾಹಸಪ್ರಿಯತೆ ಮನೋಭಾವವು ಆವರಿಸಲಿದ್ದು ಚಾರಣ ಅಥವಾ ಸವಾಲಿನ ಕೆಲಸಗಳನ್ನು ಮಾಡುವಿರಿ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ಹಾಗೂ ಸಮಾಧಾನ ತರಲಿದೆ.
16 ಫೆಬ್ರುವರಿ 2026, 22:30 IST
ಧನು
ವಿಲಾಸೀ ವಸ್ತುಗಳ ಖರೀದಿ ಮಾಡುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ತೋರಲಿದೆ. ನಿಮ್ಮ ಸೇವಾ ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ.
16 ಫೆಬ್ರುವರಿ 2026, 22:30 IST
ಮಕರ
ಜೀವನದಲ್ಲಿ ಹಳೆಯ ಘಟನೆಗಳಿಂದ ಕಲಿತ ಪಾಠ ಉತ್ತಮ ತಿಳಿವಳಿಕೆಗೆ ಕಾರಣವಾಗುವುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ತರಹದ ಅವಕಾಶಗಳು ಒದಗಿ ಬರುತ್ತವೆ.
16 ಫೆಬ್ರುವರಿ 2026, 22:30 IST
ಕುಂಭ
ಅಭಿಪ್ರಾಯಗಳು ಬೇರೆಯವರ ಆಲೋಚನೆಗೆ ಹೊಂದಿಕೊಳ್ಳುವುದು ಬಹಳ ಕಷ್ಟಕರ ಎನಿಸಲಿದೆ. ನಿಯೋಜಿತ ಕಾರ್ಯ ಕಲಾಪಕ್ಕೆ ಪುಟ್ಟ ಆತಂಕಗಳು ಎದುರಾಗಲಿವೆ.
16 ಫೆಬ್ರುವರಿ 2026, 22:30 IST
ಮೀನ
ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸುವುದು ಉತ್ತಮ. ಸಂತೋಷವಾಗಿ ದಿನ ಕಳೆಯುವ ಹಾಗೆ ಆಗುವುದು. ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುವುದು.
16 ಫೆಬ್ರುವರಿ 2026, 22:30 IST