ಬೆಂಗಳೂರು: 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬಹುಮತದಿಂದ ಗೆದ್ದರೆ ತಾನು ಪ್ರಧಾನಿಯಾಗುವೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಟ್ವಿಟರ್ನಲ್ಲಿ ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಟ್ವಿಟರ್ನ ಅನೇಕ ಬಳಕೆದಾರರು ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಲೇವಡಿ ಮಾಡಿದ್ದಾರೆ. ಆದರೆ, ಕೆಲವರು ರಾಹುಲ್ ಅವರನ್ನು ಬೆಂಬಲಿಸಿಯೂ ಟ್ವೀಟ್ ಮಾಡಿದ್ದಾರೆ. ಇದು #IfRahulBecomesPM ಎಂಬ ಹ್ಯಾಷ್ಟ್ಯಾಗ್ನಲ್ಲಿ ಟ್ರೆಂಡ್ ಆಗಿದೆ.
‘ರಾಹುಲ್ ಪ್ರಧಾನಿಯಾದರೆ ಭಾರತ ಆಲೂಗಡ್ಡೆ ಆಮದು ಮಾಡಿ ಚಿನ್ನ ರಫ್ತು ಮಾಡಲಿದೆ’ ಎಂದು ರಾ ಬೀಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.
#IfRahulBecomesPM, India will be importing potatoes and exporting gold