ದ್ರಾವಿಡ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಬಹು ಹಿಂದೆ ರಚಿಸಿರುವ ಸಾಕಷ್ಟು ಸಾಹಿತ್ಯ ಕೃತಿಗಳು ಲಭ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 3,500 ವರ್ಷಗಳ ಹಿಂದೆ ಇಂಡೊ–ಆರ್ಯನ್ನರು ಭಾರತಕ್ಕೆ ಬರುವ ಮೊದಲೇ ದ್ರಾವಿಡರು ಭಾರತ ಉಪಖಂಡದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಸಂಶೋಧನಾ ವಲಯದಲ್ಲಿ ಸಹಮತ ಮೂಡಿದೆ.