ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಿಂದ ಹಿಂದೆ ಸರಿಯುವಂತೆ ಬೈಡನ್‌ಗೆ ಸಂಸದರ ಆಗ್ರಹ

Published 8 ಜುಲೈ 2024, 14:05 IST
Last Updated 8 ಜುಲೈ 2024, 14:05 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನವೆಂಬರ್ 5ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಹಿಂದೆ ಸರಿಯಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಕನಿಷ್ಠ ಐದು ಸಂಸದರು ಭಾನುವಾರ ಆಗ್ರಹಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಡೆಮಾಕ್ರಟಿಕ್ ಪಕ್ಷದ ಸಂಸದರಾದ ಜೆರಿ ನಾಡ್ಲೆರ್, ಮಾರ್ಕ್ ಟಕಾನೊ, ಜೊ ಮೊರೆಲ್, ಟೆಡ್‌ ಲಿಯು ಹಾಗೂ ಆಡಂ ಸ್ಮಿತ್‌ ಜೂನ್ 27ರಂದು ಅಟ್ಲಾಂಟದಲ್ಲಿ ನಡೆದ ಸಂವಾದದಲ್ಲಿ ಜೋ ಬೈಡನ್ ಅವರ ಕೆಟ್ಟ ಪ್ರದರ್ಶನದ ಬಗ್ಗೆ ಚರ್ಚಿಸಿದ್ದರು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ನಡೆದ ಸಭೆಯಲ್ಲಿ ಈ ರೀತಿ ಚರ್ಚಿಸಲಾಗಿತ್ತು.

ಸ್ವತಃ ಬೈಡನ್ ತಮ್ಮ ಪ್ರದರ್ಶನವನ್ನು ‘ಕೆಟ್ಟ ರಾತ್ರಿ’ ಎಂದು ಬಣ್ಣಿಸಿದ್ದಾರೆ. ಅವರ ಪ್ರಖ್ಯಾತಿ ಕಡಿಮೆಯಾಗುತ್ತಿದ್ದು, ಅವರ ಪಕ್ಷದವರೇ ಬೈಡನ್ ಆರೋಗ್ಯ ಸ್ಥಿತಿ ಮತ್ತು ಮಂದಿನ ನಾಲ್ಕು ವರ್ಷ ದೇಶವನ್ನು ಆಳುವ ಅವರ ಸಾಮರ್ಥ್ಯವನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಆದರೆ, ಬೈಡನ್‌ ಅವರು ತಾವೇ ಸ್ಪರ್ಧೆ ಮಾಡುವುದಾಗಿ ಪ್ರತಿಪಾದಿಸುತ್ತಿದ್ದು, ನವೆಂಬರ್‌ನಲ್ಲಿ ಟ್ರಂಪ್‌ ವಿರುದ್ಧ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT