ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಣೆಯಿಂದ ಬೆದರಿಸಿದ ವೃದ್ಧನ ಬಂಧನ

Published 28 ಮೇ 2024, 16:17 IST
Last Updated 28 ಮೇ 2024, 16:17 IST
ಅಕ್ಷರ ಗಾತ್ರ

ಅಝುಸಾ: ದಕ್ಷಿಣ ಕ್ಯಾಲಿಫೋರ್ನಿಯಾದ ನಿವಾಸಿಗಳನ್ನು ಕವಣೆ ಮೂಲಕ ಹಲವು ವರ್ಷಗಳ ಕಾಲ ಬೆದರಿಸಿದ್ದ 81 ವರ್ಷದ ವೃದ್ಧನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

9–10 ವರ್ಷಗಳ ಅವಧಿಯಲ್ಲಿ ಆರೋಪಿಯು ತನ್ನ ಕವಣೆಯ ಮೂಲಕ ಹಲವರನ್ನು ಬಲಿಪಶು ಮಾಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ, ಹಲವು ಕಾರು ಮತ್ತು ಮನೆಗಳ ಕಿಟಕಿ ಗಾಜುಗಳಿಗೆ ಹಾನಿ ಉಂಟು ಮಾಡಿದ್ದನೆಂದು ಶಂಕಿಸಲಾಗಿದೆ ಎಂದು ಅಝುಸಾ ಪೊಲೀಸ್ ಇಲಾಖೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. 

ವೃದ್ಧನ ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿತ್ತು. ಆತನ ಮನೆಯಲ್ಲಿ ಕವಣೆ ಮತ್ತು ಅದಕ್ಕೆ ಬಳಸುವ ಸಾಧನಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT