ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ಚುನಾವಣೆ: ನದೆಜ್ದಿನ್ ಅನರ್ಹ

Published 8 ಫೆಬ್ರುವರಿ 2024, 13:54 IST
Last Updated 8 ಫೆಬ್ರುವರಿ 2024, 13:54 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದ ಬೋರಿಸ್ ನದೆಜ್ದಿನ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಎಂದು ರಷ್ಯಾದ ಕೇಂದ್ರ ಚುನಾವಣಾ ಆಯೋಗವು ಹೇಳಿದೆ.

ನದೆಜ್ದಿನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಕಾನೂನಿನ ಪ್ರಕಾರ ಕನಿಷ್ಠ ಒಂದು ಲಕ್ಷ ಸಹಿ ಸಂಗ್ರಹಿಸಬೇಕಿತ್ತು. ಅವರು ತಮ್ಮ ಪರವಾಗಿ ಸಲ್ಲಿಸಿದ್ದ ಸಹಿಗಳ ಪೈಕಿ ಒಂಬತ್ತು ಸಾವಿರಕ್ಕೂ ಹೆಚ್ಚಿನವು ಅಮಾನ್ಯವಾಗಿವೆ ಎಂದು ಆಯೋಗ ಹೇಳಿದೆ. ರಷ್ಯಾದ ಚುನಾವಣಾ ನಿಯಮಗಳ ಪ್ರಕಾರ, ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ಬಯಸುವವರ ಪರವಾಗಿ ಸಲ್ಲಿಕೆಯಾಗುವ ಸಹಿಗಳ ಪೈಕಿ ಶೇಕಡ 5ಕ್ಕಿಂತ ಹೆಚ್ಚಿನವು ತಿರಸ್ಕೃತಗೊಳ್ಳಬಾರದು.

ನದೆಜ್ದಿನ್ ಅವರು ಉಕ್ರೇನ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ. ಅಲ್ಲದೆ, ಪಶ್ಚಿಮದ ದೇಶಗಳ ಜೊತೆ ಮಾತುಕತೆ ಆರಂಭಿಸಬೇಕು ಎಂದು ಕೂಡ ಆಗ್ರಹಿಸಿದ್ದಾರೆ. ತಮ್ಮನ್ನು ಅನರ್ಹಗೊಳಿಸಿರುವ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ನದೆಜ್ದಿನ್ ಹೇಳಿದ್ದಾರೆ.

ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಯು ಮಾರ್ಚ್‌ 15–17ರಂದು ನಡೆಯಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT