ಸ್ಟಾಕ್ಹೋಮ್: ಸ್ವಿಡನ್ನ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ 11 ಜನ ಮೃತಪಟ್ಟಿರುವ ಘಟನೆ ನಡೆದಿದೆ.

ತಕ್ಷಣವೇ ಪರಿಹಾರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಲವು ಜನರನ್ನು ರಕ್ಷಿಸಿ ಗುಂಡಿನ ದಾಳಿ ನಡೆಸಿದ್ದವನನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸ್ಟಾಕ್ಹೋಮ್ನಿಂದ 200 ಕಿ.ಮೀ ದೂರ ಇರುವ ಒರೆಬ್ರೊ ನಗರದ ಹೊರವಲಯದಲ್ಲಿನ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಈ ಗುಂಡಿನ ದಾಳಿ ನಡೆದಿದೆ. ಈ ವೇಳೆ ಸ್ವಿಡನ್ನಲ್ಲಿ ರಾಷ್ಟ್ರೀಯ ಪರೀಕ್ಷೆಗಳು ನಡೆಯುತ್ತಿದ್ದವು.

ಸ್ವಿಡನ್ ಇತಿಹಾಸದಲ್ಲೇ ಅತಿದೊಡ್ಡ ಗುಂಡಿನ ದಾಳಿ ನಡೆದಿದೆ. ಘೋರ ಹಿಂಸೆಯ ಮೂಲಕ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಇದರಿಂದ ನಮಗೆ ದೊಡ್ಡ ಆಘಾತವಾಗಿದೆ. ಗುಂಡಿನ ದಾಳಿ ನಡೆದ ಸ್ಥಳವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಸ್ವಿಡನ್ ಪ್ರಧಾನ ಮಂತ್ರಿ ಯೂಇಫ್ ಕ್ರಿಸ್ಟನ್ಸನ್ ಹೇಳಿದ್ದಾರೆ

ಸಾವಿನ ಸಂಖ್ಯೆ ಹೆಚ್ಚಾಗಬಹುದು. ಒಬ್ಬನೇ ವ್ಯಕ್ತಿ ದಾಳಿ ನಡೆಸಿದ್ದಾನೆ. ಆತನನ್ನು ಕೊಂದಿದ್ದೇವೆ ಎಂದು ಸ್ವಿಡನ್ ಪೊಲೀಸ್ ಪಡೆಯ ಮುಖ್ಯಸ್ಥ ರಾಬರ್ಟೊ ತಿಳಿಸಿದ್ದಾರೆ.

ದಾಳಿ ನಡೆದಿರುವುದರಲ್ಲಿ ಭಯೋತ್ಪಾದಕ ಸಂಘಟನೆಗಳ ಕೈವಾಡ ಇದ್ದಂತಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.
.ವಿದೇಶ ವಿದ್ಯಮಾನ | ಡೊನಾಲ್ಡ್ ಟ್ರಂಪ್ ‘ತೆರಿಗೆ ತಂತ್ರಗಾರಿಕೆ’.ಅಮೆರಿಕದಿಂದ ನಮ್ಮ ಪ್ರಜೆಗಳನ್ನು ಕರೆಸಿಕೊಳ್ಳಲು ಸಿದ್ಧ: ಚೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.