ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಪುವಾ ನ್ಯೂಗಿನಿ: ಸುರಕ್ಷಿತ ಪ್ರದೇಶಕ್ಕಾಗಿ ಶೋಧ

Published 29 ಮೇ 2024, 14:10 IST
Last Updated 29 ಮೇ 2024, 14:10 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಆಸ್ಟ್ರೇಲಿಯಾ): ಪಪುವಾ ನ್ಯೂಗಿನಿಯ ಎತ್ತರದ ಪ್ರದೇಶಗಳಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಕಾರಣ ಅಲ್ಲಿಂದ ಸಾವಿರಾರು ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಸುರಕ್ಷಿತ ಪ್ರದೇಶಕ್ಕಾಗಿ ಹುಡುಕಾಟ ನಡೆಯುತ್ತಿದೆ.

ದಕ್ಷಿಣ ಪೆಸಿಫಿಕ್‌ ದ್ವೀಪರಾಷ್ಟ್ರದಲ್ಲಿ ಶುಕ್ರವಾರ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಸಹಸ್ರಾರು ಜನರು ಭೂಮಿಯಲ್ಲಿ ಹುದುಗಿಹೋಗಿದ್ದಾರೆ. ಈ ಪ್ರದೇಶದಲ್ಲಿ ಬದುಕುಳಿದವರೂ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಲ್ಲಿಂದ 8,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ತುರ್ತು ರಕ್ಷಣಾ ಪಡೆಯವರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಎಂಗಾ ಪ್ರಾಂತ್ಯದ ಯಂಬಲಿ ಬಳಿ ಸುಮಾರು 50 ಕುಟುಂಬದವರಿಗೆ ಮಾತ್ರ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಿದೆ. ಉಳಿದವರಿಗಾಗಿ ಪರ್ಯಾಯ ಪ್ರದೇಶಗಳನ್ನು ತುರ್ತಾಗಿ ಗುರುತಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ‘ಕೇರ್‌ ಇಂಟರ್‌ನ್ಯಾಷನಲ್‌’ ಸಂಸ್ಥೆಯ ನಿರ್ದೇಶಕ ಜಸ್ಟಿನ್‌ ಮೆಕ್‌ಮಹೋನ್‌ ತಿಳಿಸಿದ್ದಾರೆ.

‘ಭೂಮಿ ಸಡಿಲಗೊಂಡಿದೆ. ಇದರಿಂದ ಮಾನವೀಯ ನೆರವು ಒದಗಿಸುವ ಕಾರ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ರೆಡ್‌ಕ್ರಾಸ್‌ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿಯ ಅಧ್ಯಕ್ಷ ಕೇಟ್‌ ಫೋರ್ಬ್ಸ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT