ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್‌ ಶಾಂತಿ ಪುರಸ್ಕಾರ: ಹೋರಾಟಗಾರ್ತಿ ನರ್ಗೆಸ್ ಪರ ಮಕ್ಕಳಿಂದ ಸ್ವೀಕಾರ

Published 10 ಡಿಸೆಂಬರ್ 2023, 16:17 IST
Last Updated 10 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಹೆಲ್ಸಿನ್‌ಕಿ: ಬಂಧಿತ ಇರಾನ್‌ ಹೋರಾಟಗಾರ್ತಿ ನರ್ಗೆಸ್‌ ಮೊಹಮ್ಮದಿ ಅವರಿಗೆ ಸಂದಿರುವ ನೊಬೆಲ್‌ ಶಾಂತಿ ಪುರಸ್ಕಾರವನ್ನು ಅವರ ಇಬ್ಬರು ಮಕ್ಕಳು ನಾರ್ವೆಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.

ಒಸ್ಲೊ ಸಿಟಿ ಹಾಲ್‌ನಲ್ಲಿ ನಡೆದ ಸಮಾರಂಭಕ್ಕೆ ತಂದೆಯೊಂದಿಗೆ ಆಗಮಿಸಿದ್ದ ಅಲಿ ಮತ್ತು ಕೈನಾ ರಹ್ಮಾನಿ, ತಾಯಿಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಮೊಹಮ್ಮದಿ ಅವರು ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳು, ಪ್ರಜಾಪ್ರಭುತ್ವದ ಪರವಾಗಿ ಮತ್ತು ಮರಣ ದಂಡನೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಇರಾನ್‌ನಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರ ಪರ ಧ್ವನಿ ಎತ್ತಿದ, ಮಾನವ ಹಕ್ಕುಗಳಿಗಾಗಿ ಹೋರಾಡಿದ ಮತ್ತು ಎಲ್ಲರಿಗೂ ಸ್ವಾತಂತ್ರ್ಯ ಸಿಗಬೇಕೆನ್ನುವ ಆಶಯದಿಂದ ಕೆಲಸ ಮಾಡಿದ ಕಾರಣಕ್ಕಾಗಿ ನರ್ಗೆಸ್‌ ಅವರನ್ನು ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. 

‘ಬೆಂಬಲ ಅಗತ್ಯ’

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೈನಾ ರಹ್ಮಾನಿ ಅವರು ತಮ್ಮ ತಾಯಿ  ಕಳುಹಿಸಿದ ಸಂದೇಶವನ್ನು ಓದಿದರು. ‘ಇಸ್ಲಾಮಿಕ್‌ ರಿಪಬ್ಲಿಕ್‌ ಸರ್ಕಾರದ ವಿರುದ್ಧ ಹೋರಾಡಲು ಇರಾನ್‌ ಸಮಾಜಕ್ಕೆ ಜಾಗತಿಕ ಮತ್ತು  ಪತ್ರಕರ್ತರ ಬೆಂಬಲ ಅಗತ್ಯವಿದೆ. ಈವರೆಗೆ ನೀವು ಮಾಡಿದ ಸಹಾಯಕ್ಕೆ ಧನ್ಯವಾದ’ ಎಂದು ನರ್ಗೆಸ್ ಅವರು  ಪತ್ರದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT