ಬೀಜಿಂಗ್ : ‘ಹೊರಗೆ ಇರುವಾಗ ಜನರು ಮಾಸ್ಕ್ ಧರಿಸಬೇಕು’ ಎನ್ನುವ ಮಾರ್ಗದರ್ಶಿ ಸೂಚಿಯನ್ನು ಬೀಜಿಂಗ್ ಕೈಬಿಟ್ಟಿದೆ. ಈ ಮೂಲಕ ಕೊರೊನಾ ವೈರಸ್ ನಿಯಂತ್ರಿಸಿರುವ ಚೀನಾದ ಮೊದಲ ನಗರವೆಂದು ಬೀಜಿಂಗ್ ಸಾಂಕೇತಿಕವಾಗಿಸೂಚಿಸಿದೆ.
‘ಸೋಂಕು ತಡೆಗಟ್ಟಲು ಹಲವು ದಿನಗಳ ಕಾಲ ಮಾಸ್ಕ್ ತೊಟ್ಟಿದ್ದ ಜನರು ಈಗ ಬೀಜಿಂಗ್ನಲ್ಲಿ ಮಾಸ್ಕ್ಗಳಿಲ್ಲದೇ ಮುಕ್ತವಾಗಿ ಉಸಿರಾಡಬಹುದು’ ಎಂದು ಬೀಜಿಂಗ್ನ ರೋಗತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.