ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್‌: ಸ್ಪರ್ಧೆಯಿಂದ ಹಿಂದೆ ಸರಿದ ಹಾಶಿಮಿ

Published 27 ಜೂನ್ 2024, 14:21 IST
Last Updated 27 ಜೂನ್ 2024, 14:21 IST
ಅಕ್ಷರ ಗಾತ್ರ

ದುಬೈ: ಇರಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಅಮೀರ್‌ಹೊಸೇನ್ ಘಜೀಜಾದೇ ಹಾಶಿಮಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಗುರುವಾರ ವರದಿ ಮಾಡಿದೆ.

53 ವರ್ಷದ ಹಾಶಿಮಿ ಅವರು ಇಬ್ರಾಹಿಂ ರೈಸಿ ಅವರ ಆಡಳಿತದಲ್ಲಿ ಉಪಾಧ್ಯಕ್ಷರುಗಳಲ್ಲಿ ಒಬ್ಬರಾಗಿದ್ದರು. 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಸುಮಾರು 10 ಲಕ್ಷ ಮತಗಳೊಂದಿಗೆ ಕೊನೆಯ ಸ್ಥಾನ ಗಳಿಸಿದ್ದರು.

ಹಾಶಿಮಿ ಅವರು ಹಿಂದೆ ಸರಿದಿರುವುದರಿಂದ ಕಣದಲ್ಲಿ ಇದೀಗ ಐವರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಇರಾನ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ರೈಸಿ ಅವರು ಮೇ ತಿಂಗಳಲ್ಲಿ ನಡೆದಿದ್ದ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT