ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ | ಭಾರತದಿಂದ ತೆರಳಿದ ಮಗುವಿನಲ್ಲಿ ಹಕ್ಕಿಜ್ವರ ಪತ್ತೆ

Published 22 ಮೇ 2024, 15:23 IST
Last Updated 22 ಮೇ 2024, 15:23 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಮಗುವೊಂದರಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ಮಾನವನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ಎಂದು ಆಸ್ಟ್ರೇಲಿಯಾ ಹೇಳಿದೆ. ಕೆಲ ವಾರಗಳ ಹಿಂದೆ ಭಾರತದಲ್ಲಿದ್ದಾಗ ಮಗುವಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಮಗು ಚೇತರಿಸಿಕೊಂಡಿದೆ.

‘ವಿಕ್ಟೋರಿಯಾದಲ್ಲಿ ಮಗುವೊಂದಕ್ಕೆ ಹಕ್ಕಿಜ್ವರ (H5N1) ಇರುವುದು ಪತ್ತೆಯಾಗಿದೆ. ಇದು ದೇಶದ ಮೊದಲ ಪ್ರಕರಣ. ಭಾರತದಲ್ಲಿರುವಾಗ ಸೋಂಕು ತಗುಲಿರಬಹುದು. ಮಾರ್ಚ್‌ನಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿತ್ತು’ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ 9news.com.au ವರದಿ ಮಾಡಿದೆ.

‘ಹಕ್ಕಿ ಜ್ವರ ಎಂದೂ ಕರೆಯಲ್ಪಡುವ avian influenza A(H5N1) ಸೋಂಕಿನ ಮಾನವ ಪ್ರಕರಣವು ವಿಕ್ಟೋರಿಯಾದಲ್ಲಿ ವರದಿಯಾಗಿದೆ. ಈ ಸೋಂಕು ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸೋಂಕು ವ್ಯಾಪಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ’ ಎಂದು ವಿಕ್ಟೋರಿಯಾದ ಆರೋಗ್ಯ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

‘ಮಾರ್ಚ್ 2024ರಲ್ಲಿ ವಿದೇಶದಿಂದ ಭಾರತಕ್ಕೆ ಆಗಮಿಸಿದ ಮಗುವೊಂದರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಗುವಿಗೆ ತೀವ್ರವಾಗಿ ಸೋಂಕು ಭಾದಿಸಿದ್ದು, ಈಗ ಸಂಪೂರ್ಣ ಗುಣಮುಖವಾಗಿದೆ’ ಎಂದು ಯಾವುದೇ ದೇಶವನ್ನು ಉಲ್ಲೇಖಿಸದೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT