ನ್ಯೂಯಾರ್ಕ್: ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ (ಎಫ್ಐಎ), ವಿಶ್ವ ಮಹಿಳಾ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾರತ ಮೂಲದ ನಾಲ್ವರು ಸಾಧಕಿಯರನ್ನು ಗೌರವಿಸಿದವು.

ಜೆಪಿ ಮಾರ್ಗನ್ ಕಂಪನಿಯ ಸಲಹೆ, ವಿಲೀನ ಹಾಗೂ ಸ್ವಾಧೀನ ಕುರಿತ ಜಾಗತಿಕ ಮುಖ್ಯಸ್ಥೆ ಅನು ಅಯ್ಯಂಗಾರ್, ಎ-ಸೀರಿಸ್ ಮ್ಯಾನೇಜ್ಮೆಂಟ್ ಮತ್ತು ಇನ್ವೆಸ್ಟ್ಮೆಂಟ್ ಸಿಇಒ ಮತ್ತು ಸಂಸ್ಥಾಪಕಿ ಅಂಜುಲಾ ಆಚಾರ್ಯ, ಎಲ್ಡಿಪಿ ವೆಂಚರ್ಸ್ನ ಸಿಇಒ ಮತ್ತು ಸಂಸ್ಥಾಪಕಿ ವೆಂಡಿ ಡೈಮಂಡ್ ಮತ್ತು ಸಿಎನ್ಬಿಸಿಯ ವರದಿಗಾರ್ತಿ ಮತ್ತು ನಿರೂಪಕಿ ಸೀಮಾ ಮೋದಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅನ್ನಪೂರ್ಣ ದೇವಿ ಅವರು, ‘ಭಾರತ–ಅಮೆರಿಕ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಉಭಯ ದೇಶಗಳ ಮಹಿಳೆಯರು ಮುಂಚೂಣಿ ಪಾತ್ರ ವಹಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.