ಇಂದು ವಿಶ್ವ ಮಹಿಳಾ ದಿನ: ಮನೆ ನಡೀಬೇಕು, ಮನೆಯವರೇ ಮಾಡಬೇಕು..
ಸೂರ್ಯ ಮೂಡುವ ಮೊದಲೇ ಎದ್ದು, ಮನೆ–ಮನೆಗೆ ದಿನಪತ್ರಿಕೆ ಹಂಚುವ ಕೆಲಸದಲ್ಲಿ ಹುಡುಗರು/ಯುವಕರದ್ದೇ ಸಿಂಹಪಾಲು. ಜನದಟ್ಟಣೆ ಇಲ್ಲದೇ ಇರುವಲ್ಲಿ, ಕೊರೆಯುವ ಚಳಿಯಲ್ಲಿ ಮಣಭಾರದ ಬಂಡಲ್‌ಗಳನ್ನು ಹೊತ್ತು ಬೀದಿ–ಬೀದಿ ತಿರುಗುವ ಈ ವೃತ್ತಿಯಲ್ಲಿ ಮಹಿಳೆಯರೂ ಇದ್ದಾರೆ. ಬೆಂಗಳೂರು ನಗರ ಒಂದರಲ್ಲೇ ‘ಪ್ರಜಾವಾಣಿ’ಯ ಏಜೆಂಟರು ಮತ್ತು ವಿತರಕರಲ್ಲಿ ಇಂತಹ 15 ಮಹಿಳೆಯರು ಇದ್ದಾರೆ. ಕೆಲವರು ಇದೇ ವೃತ್ತಿಯಲ್ಲಿ 30 ವರ್ಷ ಪೂರೈಸಿದ್ದಾರೆ. ವಿಶ್ವ ಮಹಿಳಾ ದಿನದ ನೆಪದಲ್ಲಿ ಅಂತಹ ನಾಲ್ವರು ಮಹಿಳಾ ಪತ್ರಿಕಾ ವಿತರಕರು ತಮ್ಮ ವೃತ್ತಿ ಜೀವನವನ್ನು ಮತ್ತು ಅಂತಹ ಆಯ್ಕೆಗೆ ಕಾರಣವಾದ ಬದುಕನ್ನು ಸುಕೃತ ಎಸ್.ಅವರೊಂದಿಗೆ ಹಂಚಿಕೊಂಡಿದ್ದಾರೆ.Last Updated 7 ಮಾರ್ಚ್ 2023, 21:04 IST