ಮೈಸೂರು: ನಗರದಲ್ಲಿ ಶನಿವಾರ ಎಲ್ಲೆಡೆ ಮಹಿಳಾ ದಿನದ ಸಂಭ್ರಮ ಮನೆಮಾಡಿತ್ತು. ಶಾಲೆ–ಕಾಲೇಜುಗಳಲ್ಲಿ, ಸಂಘ–ಸಂಸ್ಥೆಗಳಲ್ಲಿ ಮಹಿಳೆಯ ತಾಳ್ಮೆ, ಶ್ರಮ, ಪ್ರತಿಭೆ, ಬದ್ಧತೆಗಳನ್ನು ಗಣ್ಯರು ಕೊಂಡಾಡಿದರು. ಮಹಿಳಾ ಸಬಲೀಕರಣ, ಮಹಿಳೆಯರ ಪರವಾದ ಕಾನೂನುಗಳ ಸಮರ್ಪಕ ಅನುಷ್ಠಾನದ ಕುರಿತು ಪ್ರತಿಪಾದಿಸಿದರು. ಮಹಿಳೆಯರು ದಿನನಿತ್ಯದ ಜಂಜಾಟ ಮರೆತು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಾಧಕ ಮಹಿಳೆಯರಿಗೆ ಸನ್ಮಾನದ ಖುಷಿಯೂ ದೊರಕಿತು. ಮಕ್ಕಳು ತಾಯಂದಿರ ಸಂಭ್ರಮ ನೋಡಿ ತಾವೂ ಸಂಭ್ರಮಿಸಿದರು.

ಬಿಜೆಪಿ ಮಹಿಳಾ ಮೋರ್ಚಾ: ‘ಮಹಿಳಾ ಪರವಾದ ಕಾನೂನುಗಳು ಇದ್ದರೂ ಮಹಿಳೆಯರ ಹೋರಾಟ ಮುಂದುವರಿದಿದೆ. ಕಾನೂನುಗಳ ಸಮರ್ಪಕ ಅನುಷ್ಠಾನವೇ ಅದಕ್ಕೆ ಪರಿಹಾರ’ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಪ್ರತಿಪಾದಿಸಿದರು.

ಬಿಜೆಪಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ ನಿಲ್ಲಬೇಕು. ಎಲ್ಲ ಮಹಿಳೆಯರು ಆರ್ಥಿಕ, ಶೈಕ್ಷಣಿಕವಾಗಿ ಸಶಕ್ತರಾಗಬೇಕು’ ಎಂದು ಹೇಳಿದರು.

‘ಮಹಿಳೆಯರ ಮಮತೆ, ತ್ಯಾಗ, ಸಮರ್ಪಣೆ ಗುಣ ಕಳೆದು ಹೋಗಬಾರದು. ಅವರ ಸೇವೆ ಸಮಾಜಕ್ಕೆ ಅವಶ್ಯಕ. ಕಾಂಗ್ರೆಸ್ ಸರ್ಕಾರ ಬಜೆಟ್ನಲ್ಲಿ ಮಹಿಳೆಯರಿಗೆ ಒಳ್ಳೆಯ ಕಾರ್ಯಕ್ರಮ ನೀಡಿಲ್ಲ. ಬಾಣಂತಿಯರ ಸಾವು, ಅತ್ಯಾಚಾರ ಪ್ರಕರಣಗಳಿಂದ ತಲೆ ತಗ್ಗಿಸುವಂತಾಗಿದೆ’ ಎಂದು ಕಿಡಿಕಾರಿದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ನಾನಾ ಕಾರ್ಯಕ್ರಮ ರೂಪಿಸಿದೆ. ವಿದ್ಯಾವಂತ ಮಹಿಳೆಯರು ಉನ್ನತ ಅಧಿಕಾರ ಪಡೆದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿ.ಪಂ. ಸಿಇಒ ಆಗಿದ್ದ ಕೆ.ಎಂ.ಗಾಯಿತ್ರಿ, ಡಿಸಿಪಿ ಬಿ.ಟಿ.ಜಾಹ್ನವಿ, ಬಿಜೆಪಿ ಮೇಯರ್ ಆಗಿದ್ದ ಸುನಂದಾ ಫಾಲನೇತ್ರ, ಉಪ ಮೇಯರ್ ಮಹದೇವಮ್ಮ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿರುವುದು ಇದಕ್ಕೆ ಸಾಕ್ಷಿ’ ಎಂದು ಪ್ರಶಂಸಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ‘ಮಹಿಳೆಯರಲ್ಲಿ ಪ್ರಾಮಾಣಿಕತೆ ಬದ್ಧತೆ, ಪ್ರೀತಿ, ವಿಶ್ವಾಸ ಅಪಾರ. ನಗರ ಪಾಲಿಕೆ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ ಮಹಿಳೆಯರು ಪುರುಷರಿಗಿಂತ ಉತ್ತಮ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.

ಸಾಧಕ ಮಹಿಳೆಯರಾದ ವಿನುತಾ ಕೇಶವ್, ಕಲ್ಪನಾ, ಅಶ್ವಿನಿ ಪ್ರಕಾಶ್, ಲಲಿತಾಂಬ, ಐಶ್ವರ್ಯ, ಉಮಾ ನಾಗರಾಜ್, ಕಾವೇರಮ್ಮ, ಸೌಮ್ಯ ಅವರನ್ನು ಸನ್ಮಾನಿಸಲಾಯಿತು.

ಪೂರ್ಣಿಮಾ ಆಸ್ಪತ್ರೆಯ ಮುಖ್ಯಸ್ಥೆ ಡಾ.ಪೂರ್ಣಿಮಾ ಮಧುಸೂದನ್ ಮಾತನಾಡಿದರು. ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮುಖಂಡರಾದ ಬಿ.ಎಂ.ರಘು, ಕೇಬಲ್ ಮಹೇಶ್, ಶಾರದಾ, ರೂಪಾ, ಶಾಂತಮ್ಮ ಈಶ್ವರ್, ರತ್ನ ಲಕ್ಷ್ಮಣ್, ಸವಿತಾ ವಿ.ಪಿ, ನರಸಿಂಹರಾಜ ಕ್ಚೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಲಿನಿ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.