ರಾಜರಾಜೇಶ್ವರಿನಗರ: ‘ಹೆಣ್ಣು ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ, ಆತ್ಮಸ್ಥೈರ್ಯದಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು’ ಎಂದು ಚಿತ್ರನಟಿ ಸೋನಲ್ ಮೊಂತೆರೊ ಹೇಳಿದರು.

ಮೈಸೂರು ರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳೆಯರ ದಿನಾಚರಣೆ ಮತ್ತು ಮಾಡ್ಯುಲರ್ ಆಪರೇಷನ್ ಥಿಯೇಟರ್ಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮನಸ್ಸನ್ನು ಗಟ್ಟಿಯಾಗಿಟ್ಟುಕೊಂಡು ಚಿಕ್ಕವಯಸ್ಸಿನಲ್ಲಿಯೇ ಯಶಸ್ಸು, ಉನ್ನತಸ್ಥಾನ, ಪದವಿ ಪಡೆದು ಸಮಾಜಮುಖಿ ಸೇವೆ ಮಾಡಿ ಹೆಸರು, ಕೀರ್ತಿ ಸಂಪಾದನೆ ಮಾಡಬೇಕು’ ಎಂದರು.

‘ಹೆಣ್ಣುಮಕ್ಕಳು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ರಾಷ್ಟ್ರ, ವಿಶ್ವಮಟ್ಟದಲ್ಲಿ ಹೆಚ್ಚು ಯಶಸ್ಸು ಸಾಧಿಸಬೇಕು’ ಎಂದು ಮೂಗಾಂಬಿಗೈ ಚಾರಿಟೆಬಲ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಎಸ್. ಲಲಿತಾಲಕ್ಷ್ಮೀ ಹೇಳಿದರು.

ರಾಜರಾಜೇಶ್ವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎ.ಸಿ.ಷಣ್ಮುಗಂ, ‘ಯಾವುದೇ ಕ್ಷೇತ್ರ, ಕುಟುಂಬದ ಸದೃಢ ನೆಮ್ಮದಿ ಮತ್ತು ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಬಹದೊಡ್ಡದಿದೆ. ನಾವೆಲ್ಲರೂ ಸ್ತ್ರೀಯರನ್ನು ಗೌರವಿಸಬೇಕು’ ಎಂದರು.

ಸೇಂಟ್ ಬೆನಡಿಕ್ಸ್ ಅಕಾಡೆಮಿಯ ನಿರ್ದೇಶಕ ಧರ್ಮಗುರು ಜೆರೋಮ್ ಒಎಸ್ಬಿ ಮಾತನಾಡಿ, ‘ಶೈಕ್ಷಣಿಕ, ಆರೋಗ್ಯಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಾಯಂದಿರಿಂದ ಉತ್ತಮ ಸೇವೆಯಾಗಿದೆ. ಹೃದಯವಂತಿಕೆಯುಳ್ಳ ತಾಯಿ ದೇವತೆಯಾಗಿ ಸಮಾಜದ ಅಭಿವೃದ್ದಿಯಲ್ಲಿ ಅವಿಸ್ಮರಣೀಯ ಪಾತ್ರ ಹೊಂದಿದ್ದಾರೆ’ ಎಂದು ಬಣ್ಣಿಸಿದರು.

ವ್ಯವಸ್ಥಾಪಕ ಟ್ರಸ್ಟಿ ಎಸ್.ಅರುಣ್ ಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ ವಿಜಯ್ ಆನಂದ್, ಎಸ್.ಸತ್ಯನಾರಾಯಣ, ವೈದ್ಯಕೀಯ ನಿರ್ದೇಶಕ ಡಾ.ರವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.