ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಉಳಿಸಲು ಹೋಗಿ ವಾಯುಮಾಲಿನ್ಯ!

ವಾಯವ್ಯ ಭಾರತ ವ್ಯಾಪ್ತಿಯ ಉಪಗ್ರಹ ಚಿತ್ರಗಳ ಆಧರಿಸಿ ಸಂಶೋಧಕರಿಂದ ಅಧ್ಯಯನ
Last Updated 31 ಜುಲೈ 2019, 18:43 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ವಾಯವ್ಯ ಭಾರತದಲ್ಲಿ ಅಂತರ್ಜಲ ಉಳಿಸಲು ಕೈಗೊಂಡಿರುವ ನೀತಿಗಳೇ ವಾಯುಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ಉಲ್ಲೇಖಿಸಿದೆ.

ನಾಸಾದ ಉಪಗ್ರಹ ಆಧಾರಿತ ಚಿತ್ರಗಳನ್ನು ಕ್ರೋಡೀಕರಿಸಿ ಕೊರ್ನೀಲ್‌ ವಿಶ್ವವಿದ್ಯಾಲಯದ ಸಂಶೋಧಕರು ಈಅಧ್ಯಯನ ವರದಿ ತಯಾರಿಸಿದ್ದಾರೆ.

‘ನೇಚರ್‌ ಸಸ್ಟೈನೇಬಿಲಿಟಿ’ ನಿಯತಕಾಲಿಕದಲ್ಲಿ ಈ ವರದಿಪ್ರಕಟವಾಗಿದ್ದು, ದೂಳು ಹಾಗೂ ಸ್ಮಾಗ್‌ನಿಂದ (ಹೊಗೆ ಮತ್ತು ಮಂಜು ಮಿಶ್ರಣ)ಈಗಾಗಲೇ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದೆ. ಅಂತರ್ಜಲಬಳಕೆಗೆ ನಿರ್ಬಂಧ ಹೇರಿರುವುದರಿಂದ ಭತ್ತ, ಗೋಧಿ, ಮೆಕ್ಕೆ ಜೋಳ ನಾಟಿಗೆ ಮುಂಗಾರುಮಳೆಯನ್ನೇ ಅವಲಂಬಿಸಬೇಕಾಗಿದೆ.

ಇದರಿಂದಕಟಾವು ವಿಳಂಬವಾಗಿ, ನವೆಂಬರ್‌ ತಿಂಗಳಿನಲ್ಲಿ ಕೃಷಿ ತ್ಯಾಜ್ಯ ಸುಡಲಾಗುತ್ತಿದೆ. ನವೆಂಬರ್‌ನಲ್ಲಿ ಗಾಳಿಯ ಚಲನೆ ಮಂದಗತಿಯಲ್ಲಿರುತ್ತದೆ. ಇದರಿಂದಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು ಉಲ್ಲೇಖಿಸಲಾಗಿದೆ.

‘2015ರಲ್ಲಿ ಭಾರತದಲ್ಲಿ 11 ಲಕ್ಷ ಜನ ಮೃತಪಟ್ಟಿದ್ದಾರೆ. ನವೆಂಬರ್‌ನಲ್ಲಿನ ಹವಾಮಾನದಿಂದಾಗಿ ವಾತಾವರಣದಲ್ಲಿಶೇ 30ರಷ್ಟು ಹೆಚ್ಚಿನ ಸೂಕ್ಷ್ಮ ಕಣಗಳು ಕ್ರೋಢೀಕರಿಸಲ್ಪಡುತ್ತಿದ್ದು, ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ವಿಶ್ವವಿದ್ಯಾಲಯದ ಪ್ರೊ.ಆ್ಯಂಡ್ರೂ ಮೆಕ್‌ಡೊನಾಲ್ಡ್‌ ವಿವರಿಸಿದರು.

2009ರಲ್ಲಿ ಕಾಯ್ದೆ ಜಾರಿ
ವಾಯವ್ಯ ಭಾರತದಲ್ಲಿ ಅಂತರ್ಜಲ ಸಂರಕ್ಷಣೆಗೆ 2009ರಲ್ಲಿ ಕಾಯ್ದೆ ರೂಪಿಸಲಾಯಿತು. ಕಾಯ್ದೆ ಅನ್ವಯ ಜೂನ್‌ 20ರ ಮೊದಲು ಭತ್ತದ ನಾಟಿ ಮಾಡುವಂತಿಲ್ಲ ಎಂಬ ನಿರ್ಬಂಧ ಹೇರಲಾಗಿದೆ. 2009ಕ್ಕಿಂತ ಮೊದಲಿನ 6 ವರ್ಷಗಳಲ್ಲಿ ಜೂನ್‌ 28ರ ಮೊದಲು ಶೇ 86ರಷ್ಟು ಗದ್ದೆಗಳಲ್ಲಿ ಭತ್ತದ ನಾಟಿಯಾಗುತ್ತಿತ್ತು.

ಕಾಯ್ದೆ ಜಾರಿ ನಂತರದಲ್ಲಿ ಈ ಪ್ರಮಾಣ ಶೇ40ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಕಟಾವು ಮಾಡಲಾಗುತ್ತಿದೆ. ನವೆಂಬರ್‌ ಮೊದಲ ಮೂರು ವಾರದಲ್ಲಿ ಕೃಷಿ ತ್ಯಾಜ್ಯವನ್ನು ಹೆಚ್ಚಾಗಿ ಸುಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

681 ಕಡೆ ಕೃಷಿ ತ್ಯಾಜ್ಯಕ್ಕೆ ಬೆಂಕಿ
2009ರ ಕಾಯ್ದೆ ಜಾರಿ ಮೊದಲು ಅ. 24ರಂದು 490 ಕಡೆ ಕೃಷಿ ತ್ಯಾಜ್ಯವನ್ನು ಸುಡುವುದು ಕಂಡುಬಂದಿತ್ತು. ಕಾಯ್ದೆ ಜಾರಿ ನಂತರ ನ.4ರಂದು 681 ಕಡೆ ಕೃಷಿ ತ್ಯಾಜ್ಯ ಸುಟ್ಟಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT