ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಮೂಲದ ಲೀಸಾ, ಈಗ ಬ್ರಿಟನ್‌ ಸಚಿವೆ

Published 6 ಜುಲೈ 2024, 15:48 IST
Last Updated 6 ಜುಲೈ 2024, 15:48 IST
ಅಕ್ಷರ ಗಾತ್ರ

ಲಂಡನ್‌: ಲೇಬರ್‌ ಪಕ್ಷದ ಲೀಸಾ ನಂದಿ ಅವರ ಕುಟುಂಬ ಬೇರುಗಳು ಭಾರತದ ಕೋಲ್ಕತ್ತದಲ್ಲಿವೆ. ‘ವೀಗನ್‌’ ಕ್ಷೇತ್ರದಿಂದ 44 ವರ್ಷದ ಲೀಸಾ ಮರುಆಯ್ಕೆ ಆಗಿದ್ದಾರೆ. ಪ್ರಧಾನಿ ಕೀರ್‌ ಸ್ಟಾಮರ್‌ ಅವರು ತಮ್ಮ ಸಂಪುಟದಲ್ಲಿ 11 ಮಹಿಳೆಯರಿಗೆ ಸಚಿವ ಸ್ಥಾನ ನೀಡಿದ್ದು, ಲೀಸಾ ಅವರು ‘ಸಂಸ್ಕೃತಿ, ಮಾಧ್ಯಮ ಹಾಗೂ ಕ್ರೀಡಾ’ ಸಚಿವರಾಗಿದ್ದಾರೆ. 

‘ಸಚಿವ ಸ್ಥಾನ ಸಿಗುತ್ತದೆ ಎಂಬುದನ್ನು ಊಹಿಸಿಯೂ ಇರಲಿಲ್ಲ. ಇದೊಂದು ನಂಬಲಸಾಧ್ಯ ಗೌರವವಾಗಿದೆ’ ಎಂದು ಲೀಸಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಲೀಸಾ ಅವರ ತಂದೆ, ‍ಪ್ರಾಧ್ಯಾಪಕರಾಗಿದ್ದವರು. ಜೊತೆಗೆ, ಬ್ರಿಟನ್‌ನಲ್ಲಿನ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟ ನಡೆಸಿದವರು. ಲೀಸಾ ಅವರ ಮುತ್ತಾತ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಾಯಿ ಲೂಸಿ ಬೇರ್ಸ್‌ (Luise Byers) ಅವರು ಬ್ರಿಟನ್‌ನವರಾಗಿದ್ದಾರೆ.

ಮಹಾತ್ಮಾ ಗಾಂಧಿ ಅವರ 1931ರ ಲ್ಯಾಂಕ್‌ಶೇರ್‌ ಭೇಟಿಯು ಬ್ರಿಟನ್‌ ಇತಿಹಾಸದಲ್ಲಿ ಬಹಳ ಪ್ರಸಿದ್ಧವಾದುದು. ಗಾಂಧಿ ಅವರನ್ನು ಲ್ಯಾಂಕ್‌ಶೇರ್‌ಗೆ ಕರೆಸಿಕೊಂಡ ಕುಟುಂಬ ನಮ್ಮದು ಎನ್ನುವುದನ್ನು ಹಾಗೂ ತಾವು ಭಾರತ ಮೂಲದವರು ಎನ್ನುವುದು ಲೀಸಾ ಅವರು ತಮ್ಮ ಪ್ರಚಾರ ಭಾಷಣಗಳಲ್ಲಿ ಹಲವು ಬಾರಿಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT